ಮಂಗಳೂರು: ಇಲ್ಲಿನ ಯೂನಿರ್ವಸಿಟಿ ಕಾಲೇಜಿನಲ್ಲಿ ಆರಂಭಗೊಂಡ ಹಿಜಾಬ್ ವಿವಾದ ಒಂದು ಹಂತಕ್ಕೆ ಮುಕ್ತಾಯಗೊಂಡಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಪ್ರವೇಶ ಇಲ್ಲ ಎಂದು ಸಿಡಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಮುಂದೇನು ಮಾಡ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ.
Advertisement
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆರಂಭಗೊಂಡಿದ್ದ ಹಿಜಾಬ್ ವಿವಾದ ಒಂದು ಹಂತಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ಕಾಲೇಜಿನಲ್ಲಿ ಹಿಜಾಬ್ ನಿಯಮ ಪಾಲಿಸಲಾಗುತ್ತಿಲ್ಲ ಅಂತಾ ಆರೋಪಿಸಿ ಧೀಡಿರ್ ಆಗಿ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದರು. ಇದರಿಂದ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಸಭೆ ಕರೆದ್ರು. ಸಭೆಯಲ್ಲಿ ಹೈಕೋರ್ಟ ತೀರ್ಪನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಬುರ್ಖಾ, ಹಿಜಾಬ್ ಧರಿಸಿ ಕಾಲೇಜ್ ಕ್ಯಾಂಪಸ್‍ಗೆ ಬರಬಹುದು. ಆದ್ರೆ ತರಗತಿ, ಲೈಬ್ರೆರಿಗೆ ಹಿಜಬ್‍ಗೆ ಅವಕಾಶ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದೆ.
Advertisement
Advertisement
ಸಿಡಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ್ ಕಾಮತ್ ಕೂಡಾ ಕೋರ್ಟ್ ಆದೇಶಕ್ಕೆ ತಲೆಬಾಗಲು ಸಲಹೆ ನೀಡಿದ್ದಾರೆ. ಸೋಮವಾರದಿಂದ ನೂರಕ್ಕೆ ನೂರು ಕೋರ್ಟ್ ಆದೇಶ ಪಾಲಿಸಬೇಕು ಅಂದಿದ್ದಾರೆ. ಇದನ್ನೂ ಓದಿ: ಸಾಮಾನ್ಯರಂತೆ ಬರಿಗಾಲಲ್ಲೇ ಕೆಸರಲ್ಲಿ ನಡೆದು ಸಂತ್ರಸ್ತರಿಗೆ ಸ್ಪಂದಿಸಿದ ಐಎಎಸ್ ಅಧಿಕಾರಿ
Advertisement
ಈ ಕಾಲೇಜಿನಲ್ಲಿ ಸಾವಿರದ ಆರು ನೂರು ವಿದ್ಯಾರ್ಥಿಗಳಿದ್ದು, 44 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದರು. ಆದ್ರೆ ಇದೀಗ ಹಿಜಾಬ್‍ಗೆ ಅವಕಾಶ ಇಲ್ಲದಿರೋದ್ರಿಂದ ಈ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಾಲೇಜ್‍ಗೆ ಬರ್ತಾರೋ ಅಥವಾ ಕಾಲೇಜ್‍ನಿಂದಲೇ ದೂರ ಸರಿಯುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.