ಮಂಗಳೂರು: ಕರಾವಳಿಯಲ್ಲಿ ಮತ್ತೆ ಹಿಜಬ್ ವಿದ್ಯಾರ್ಥಿನಿಯರು ಹೈಡ್ರಾಮಾವೇ ಮಾಡಿದ್ದಾರೆ. ಆಡಳಿತ ಮಂಡಳಿ ಖಡಕ್ ವಾರ್ನಿಂಗ್ ಕೊಟ್ಟರೂ ವಿದ್ಯಾರ್ಥಿನಿಯರು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.
Advertisement
ಹೌದು. ಆಡಳಿತ ಮಂಡಳಿ ಎಚ್ಚರಿಕೆಯ ಬೆನ್ನಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ 15 ಮಂದಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಕಾಲೇಜಿನಲ್ಲಿ ಹೊಸ ರೂಲ್ಸ್ ತಂದರೂ ಕೆಲ ವಿದ್ಯಾರ್ಥಿನಿಯರು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇದನ್ನೂ ಓದಿ: ತರಗತಿ, ಗ್ರಂಥಾಲಯಕ್ಕೂ ಹಿಜಬ್ ಧರಿಸಿ ಬರುವಂತಿಲ್ಲ- ವಿವಾದದ ಬಳಿಕ ಮಂಗಳೂರು ವಿವಿ ಖಡಕ್ ಆದೇಶ
Advertisement
Advertisement
ಕಾಲೇಜಿಗೆ ಅವಕಾಶ ಕೊಡದಿದ್ದರಿಂದ ಲೈಬ್ರರಿ ಎಂಟ್ರಿಗೆ ವಿದ್ಯಾರ್ಥಿನಿಯರು ಮುಂದಾಗಿದ್ದಾರೆ. ಈ ವೇಳೆ ಕಾಲೇಜು ಸಿಬ್ಬಂದಿ 15 ಮಂದಿಯನ್ನು ಲೈಬ್ರರಿಯಲ್ಲೂ ತಡೆದಿದ್ದಾರೆ. ಅಲ್ಲದೆ ಹಿಜಬ್ ತೆಗೆಯಲು ಮನವೊಲಿಸಿದರೂ ವಿದ್ಯಾರ್ಥಿನಿಯರು ಸುತಾರಾಂ ಒಪ್ಪಲಿಲ್ಲ. ಬದಲಾಗಿ ಕಾಲೇಜ್ ಕ್ಯಾಂಪಸ್‍ನಲ್ಲೇ ಪುಸ್ತಕ ಓದುತ್ತಾ ಕುಳಿತ ಪ್ರಸಂಗ ನಡೆಯಿತು. ಕೊನೆಗೆ ಆಡಳಿತ ಮಂಡಳಿಯವರು ಸಮಸ್ಯೆ ಬಗೆಹರಿಸಲು ಡಿಸಿ ಮೊರೆ ಹೋದರು.