ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಕಂಡಕ್ಟರ್ (Bus Conductor) ಮೃತಪಟ್ಟ ಘಟನೆ ನಗರದ ನಂತೂರು ಸರ್ಕಲ್ (Nanthur Circle) ಬಳಿ ನಡೆದಿದೆ.
ಮೃತ ನಿರ್ವಾಹಕನನ್ನು ಈರಯ್ಯ ಎಂದು ಗುರುತಿಸಲಾಗಿದೆ. ನಗರದ ಕೆಪಿಟಿ ಕಡೆಯಿಂದ ಆಗ್ನೆಸ್ ಕಡೆಗೆ ಸಿಟಿ ಬಸ್ ತೆರಳುತ್ತಿತ್ತು. ಹೀಗೆ ನಂತೂರು ಸರ್ಕಲ್ ದಾಟಿ ಮುಂದೆ ಹೋಗುವಾಗ ಬಸ್ಸಿನ ಎದುರಿನ ಫೂಟ್ ಬೋರ್ಡ್ ನಲ್ಲಿದ್ದ ಕಂಡಕ್ಟರ್ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ.
Advertisement
Advertisement
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಂಡೆಕ್ಟರ್ ನನ್ನು ಕೂಡಲೇ ಟ್ರಾಫಿಕ್ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈರಯ್ಯ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಹೆಚ್‌ಡಿ ಕುಮಾರಸ್ವಾಮಿ ತಡರಾತ್ರಿ ಆಸ್ಪತ್ರೆಗೆ ದಾಖಲು
Advertisement
Advertisement
ಚಲಿಸುವ ಬಸ್ಸಿನಿಂದ ಕಂಡೆಕ್ಟರ್ ಆಯತಪ್ಪಿ ರಸ್ತೆಗೆ ಬೀಳುವ ದೃಶ್ಯ ಅಲ್ಲೇ ಇದ್ದ ಕಾರೊಂದರ ಫ್ರಂಟ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Web Stories