ಬೆಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಕೇಸ್ (Suhas Shetty Case) ಅನ್ನು ಎನ್‌ಐಎಗೆ ವಹಿಸಬೇಕು ಎಂದು ಮಾಜಿ ಸಿಎಂ ಸದಾನಂದ ಗೌಡ (Sadananda Gowda) ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೊಂದು ಟೋಟಲ್ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಹದಗೆಟ್ಟಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ. ಒಂದೆರೆಡು ಕೇಸ್ ಅಲ್ಲ. ಬ್ಯಾಂಕ್ ದರೋಡೆ ಸೇರಿ ಅನೇಕ ಕೇಸ್ ಆಗಿವೆ. ಸರ್ಕಾರ ಕೊಲೆ ಮಾಡೋ ಇಂತಹವರಿಗೆ ಬೆಂಬಲ ಕೊಡುವ ರಾಜನೀತಿ ಮಾಡುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆ ರೀತಿ ನೋಡುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಯುದ್ಧ ಮಾಡಬೇಡಿ ಎನ್ನುತ್ತಾರೆ. ಇವತ್ತು ಹೋಗಿ ಗೃಹ ಸಚಿವರು ಸಭೆ ಮಾಡುತ್ತಿದ್ದಾರೆ. ಕೇವಲ ಮುಸ್ಲಿಂ ಸಂಘಟನೆಗಳನ್ನು ಕರೆದು ಸಭೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರನ್ನು ಕರೆದಿಲ್ಲ. ಇದು ಯಾವ ಸರ್ಕಾರದ ನೀತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ವೇಳೆ ಕಾಣಿಸಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆ ಪೊಲೀಸ್ ಕಮಿಷನರ್ ಹೇಳಿದ್ದೇನು?
ಸುಹಾಸ್ ಕೇಸ್‌ನಲ್ಲಿ 8 ಜನರ ಬಂಧನ ಆಗಿದೆ. ಆದರೆ ಅಶ್ರಫ್ ಕೊಲೆ ಕೇಸ್‌ನಲ್ಲಿ 25 ಜನ ಅರೆಸ್ಟ್ ಮಾಡ್ತಾರೆ. ಆದರೆ ಈ ಕೇಸ್ ನಲ್ಲಿ ಅಲ್ಲೇ 25 ಜನ ಇದ್ದರು,ಬುರ್ಕಾ ಹಾಕಿರೋ ವಿಡಿಯೋ ಇದ್ದರು ಅರೆಸ್ಟ್ ಆಗಿಲ್ಲ. ಈ ಸರ್ಕಾರ ಮೈನಾರಿಟಿ ಪರ ಅಂತ ತೋರಿಸಿಸೋಕೆ ಹೋಗ್ತಿದೆ.ಈ ಸರ್ಕಾರ ಈ ಕೇಸ್ ನಲ್ಲಿ ಏನು ಮಾಡೊಲ್ಲ. ಜನರು ಬೀದಿಗೆ ಇಳಿಯಬೇಕು. ಹೀಗಾಗಿ ಈ ಕೇಸ್ ಎನಐಎಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣ – 8 ಆರೋಪಿಗಳ ಬಂಧನ
ಕರಾವಳಿ ಭಾಗದಲ್ಲಿ ಇಂತಹ ಕೇಸ್ ಹೆಚ್ಚು ಆಗುತ್ತಿದೆ. ಹೀಗಾಗಿ ಎನ್‌ಐಎ (NIA) ಬ್ರ‍್ಯಾಂಚ್ ಈ ಭಾಗದಲ್ಲಿ ಪ್ರಾರಂಭ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದರು. ಈ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಕೇವಲ ಸಚಿವರು ಮೈನಾರಿಟಿ ಅವರನ್ನು ಕರೆದು ಸಭೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳನ್ನು ಕರೆದಿಲ್ಲ. ಇಂತಹ ಘಟನೆ ಆದರೆ ಆರ್‌ಎಸ್‌ಎಸ್, ಬಿಜೆಪಿ ಬಿಟ್ಟರೆ ಇವರು ಬೇರೆ ಯಾರ ಮೇಲೂ ಹೇಳಲ್ಲ. ಇಂತಹ ರಾಜನೀತಿ ಸಮಾಜಕ್ಕೆ ದೊಡ್ಡ ಮಾರಕ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!
ಕೊಲೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಮಾಡುವ ಪೋಸ್ಟರ್ ಹರಿದಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಹಾಸ್ ಶೆಟ್ಟಿಗೆ ರಕ್ಷಣೆ ಕೊಡಬೇಕಿತ್ತು. ಬೇರೆ ಕೇಸ್‌ನಲ್ಲಿ ಆರೋಪಿ ಆಗಿದ್ದ. ಸರ್ಕಾರ ಆತನ ಜೀವ ರಕ್ಷಣೆ ಮಾಡಬೇಕಿತ್ತು. ಇದನ್ನ ಮಾಡದೇ ಇರುವುದರಿಂದ ಇದಕ್ಕೆ ಒಂದು ಹಂತದಲ್ಲಿ ಸರ್ಕಾರದ ಲೋಪ ಇದೆ. ಒಲೈಕೆ ರಾಜಕೀಯ ಜಾಸ್ತಿ ಆಗುತ್ತಿದೆ. ಸರ್ಕಾರ ಇದನ್ನ ಬಿಡಬೇಕು. ಸರ್ಕಾರ ಒಂದು ಸಮುದಾಯಕ್ಕೆ ಬೆಂಬಲ ಕೊಡುತ್ತಿದೆ. ಕರಾವಳಿ ಭಾಗದಲ್ಲಿ ಎಲ್ಲಾ ಹಿಂದೂಗಳು ಬೀದಿಗೆ ಇಳಿದರೆ ಏನು ಆಗಬಹುದು. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ಕೊಡೋದಲ್ಲ ಬಹುಸಂಖ್ಯಾತರ ರಕ್ಷಣೆಯೂ ಮಾಡಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡಲು ಕೇಂದ್ರದಿಂದ ಜಾತಿಗಣತಿ: ಸದಾನಂದಗೌಡ
ಅಲ್ಪಸಂಖ್ಯಾತರಿಂದ ಕಾಂಗ್ರೆಸ್ 15 ಸೀಟು ಗೆದ್ದಿರಬಹುದು. ಉಳಿದ ಸೀಟು ಯಾರಿಂದ ಗೆದ್ದಿರಿ. ಜೆಡಿಎಸ್ ಈಗ ಎನ್‌ಡಿಎ ಜೊತೆ ಬಂದಿದೆ. ಅವರ ಜೊತೆ ಇದ್ದ ಅಲ್ಪಸಂಖ್ಯಾತರ ಮತಗಳ ಒಲೈಕೆ ಮಾಡೋಣ ಎಂದು ಹೋಗುತ್ತಿದ್ದಾರೆ. ಕ್ರಿಶ್ಚಿಯನ್ನರು ಕರಾವಳಿ ಭಾಗದಲ್ಲಿ ಇದ್ದಾರೆ. ಅವರು ಹೀಗೆ ಮಾಡುತ್ತಾರೆ. ಕಾಂಗ್ರೆಸ್ ಅವರು ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ. ಆದರೆ ಅವರು ಮಾಡುವುದೆಲ್ಲಾ ದುರ್ಯೋಧನನ ಪಾತ್ರವೇ ಎಂದು ಗುಡುಗಿದರು. ಇದನ್ನೂ ಓದಿ: ಜಮೀರ್ ಪಾಕಿಸ್ತಾನದಲ್ಲಿ ಬೇಡ, ತಮ್ಮ ಕ್ಷೇತ್ರದಲ್ಲೇ ಸೂಸೈಡ್ ಬಾಂಬರ್ ಆಗಿ ಆತ್ಮಾಹುತಿ ಮಾಡಿಕೊಳ್ಳಲಿ – ಸದಾನಂದಗೌಡ