ಅದ್ದೂರಿಯಾಗಿ ನಡೆದ ಮಂಗ್ಳೂರು ರಥೋತ್ಸವ

Public TV
1 Min Read
MNG C

ಮಂಗಳೂರು: ನಗರದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.

ವೆಂಕಟರಮಣ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಪ್ರಯುಕ್ತ ಶ್ರೀ ದೇವರಿಗೆ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶತ ಕಲಶಾಭಿಷೇಕ, ಗಂಗಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕಗಳು ನೆರವೇರಿದವು.

MNG D

ಬ್ರಹ್ಮರಥೋತ್ಸವ ಪ್ರಯುಕ್ತ ಪ್ರಾತಃ ಕಾಲದಲ್ಲಿ ವಿಶೇಷ ಮಹಾ ಪ್ರಾರ್ಥನೆ ನಡೆದು ಬಳಿಕ ಶ್ರೀ ದೇವಳದ ಅರ್ಚಕರಿಂದ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ನಡೆಯಿತು. ತದನಂತರ ಶ್ರೀದೇವರು ಯಜ್ಞಕ್ಕೆ ಛಿತೈಸಿ, ಯಜ್ಞ ಮಂಟಪದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಮಹಾ ಪೂರ್ಣ ಆಹುತಿ ನಡೆಯಿತು.

ಸಾಯಂಕಾಲ ಕಾಶಿ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ರಥೋತ್ಸವ ಜರಗಿತು. ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡರು. ದೇವಳದ ಮೊಕ್ತೇಸರರಾದ ಸಿ.ಎಲ್ ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್, ಹೈದರಾಬಾದಿನ ಉದ್ಯಮಿ ಅನಂತ್ ಪೈ, ಮುಂಡ್ಕುರು ರಾಮದಾಸ್ ಕಾಮತ್, ಮಾಜಿ ಮೊಕ್ತೇಸರರಾದ ಪದ್ಮನಾಭ ಪೈ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

MNG E 1

Share This Article
Leave a Comment

Leave a Reply

Your email address will not be published. Required fields are marked *