Connect with us

ಲಾರಿ ಹರಿದು ಬ್ಯೂಟಿಪಾರ್ಲರ್ ಮಾಲಕಿ ಸಾವು

ಲಾರಿ ಹರಿದು ಬ್ಯೂಟಿಪಾರ್ಲರ್ ಮಾಲಕಿ ಸಾವು

ಮಂಗಳೂರು: ಲಾರಿ ಹರಿದು ಬ್ಯೂಟಿಪಾರ್ಲರ್ ಮಾಲಕಿ ಮೃತಪಟ್ಟ ದುರ್ಘಟನೆ ನಗರದ ಕುಂಟಿಕಾನ ಬಿಎಂಎಸ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

ಪಂಜಿಮೊಗರು ನಿವಾಸಿ ಯೋಗೇಶ್ ಎಂಬವರ ಪತ್ನಿ ಪ್ರಿಯಾ ಸುವರ್ಣ (43) ಮೃತ ದುರ್ದೈವಿ. ಪ್ರಿಯಾ ಅವರು ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ಹೀಗಾಗಿ ಇಂದು ಕೂಡ ತಮ್ಮ ಬ್ಯೂಟಿಪಾರ್ಲರ್‌ಗೆ ಭೇಟಿ ಕೊಟ್ಟು ಸ್ಕೂಟರ್ ನಲ್ಲಿ ಸಂಜೆ ಮನೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ, ಪ್ರಿಯಾ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಲಾರಿ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದ.

ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪ್ರಿಯಾ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಶೋಧಕಾರ್ಯ ನಡೆಸಿ, ಪಣಂಬೂರು ಬಳಿ ಲಾರಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಿಯಾ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಅಗಲಿದ್ದಾರೆ. ಘಟನೆಯ ಸಂಬಂಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement
Advertisement