Connect with us

Dakshina Kannada

ಪಂಪ್‍ವೆಲ್ ಫ್ಲೈ ಓವರ್ ಕೊನೆಗೂ ಉದ್ಘಾಟನೆ: ಸಂಸದರಿಗೆ ತರಾಟೆ

Published

on

– ಕಾಂಗ್ರೆಸ್ಸಿಗರಿಂದ ಅಣಕು ಉದ್ಘಾಟನೆ

ಮಂಗಳೂರು: ಹತ್ತು ವರ್ಷಗಳಿಂದ ಪೂರ್ಣಗೊಳ್ಳದ ಪಂಪ್‍ವೆಲ್ ಫ್ಲೈಓವರ್ ಬುಧವಾರ ಏಕಾಏಕಿ ಉದ್ಘಾಟನೆಗೊಂಡಿತು. ಅರೆ ಇದೇನು ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಈ ಫೈಓವರ್ ಹೇಗೆ ಉದ್ಘಾಟನೆಗೊಂಡಿತು ಎಂದು ತಲೆಕೆಡಿಸಿಕೊಳ್ಳಬೇಡಿ. ಇದು ಅಣಕು ಉದ್ಘಾಟನೆ.

ಕಳೆದ ಹತ್ತು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಾ ಇರುವ ಈ ಫೈಓವರ್ ಇಂದಿಗೂ ಕಾಮಗಾರಿ ಪೂರ್ಣಗೊಳ್ಳದೆ ಜನ ಪ್ರತಿನಿತ್ಯ ಪರಡಾಡುತ್ತಿದ್ದಾರೆ. ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲ್ ಹತ್ತು ವರ್ಷದಲ್ಲಿ ಐದು ಬಾರಿ ಡೆಡ್ ಲೈನ್ ನೀಡಿ ಉದ್ಘಾಟನೆಗೆ ದಿನ ಘೋಷಿಸುತ್ತಿದ್ದರು. ಕೊನೆಯದಾಗಿ ಕಳೆದ 2019ರ ಡಿಸೆಂಬರ್ 31ರಂದು ಕಾಮಗಾರಿ ಮುಗಿಸಿ 2020 ಜನವರಿ 1ರಂದು ಉದ್ಘಾಟನೆ ಮಾಡುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ ಕೊನೆಯ ಗಡುವೂ ಮುಗಿದಿದ್ದು, ಇನ್ನೂ ಸಾಕಷ್ಟು ತಿಂಗಳ ಕಾಮಗಾರಿ ಉಳಿದಿದೆ. ಹೀಗಾಗಿ ಜನವರಿ 1 ರಂದು ಸಂಸದರಿಗೆ ಉದ್ಘಾಟನೆ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಾಂಗ್ರೆಸ್‍ನ ತಂಡವೊಂದು ಅದೇ ದಿನವಾದ ಜನವರಿ 1ರಂದು ಫೈಓವರ್ ಮೇಲೆ ಹೋಗಿ ಅಣಕು ಉದ್ಘಾಟನೆ ಮಾಡಿತು. ಇದನ್ನೂ ಓದಿ: ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್

ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರತಿಕೃತಿ ಮಾಡಿ ಅದರ ಮೂಲಕ ಉದ್ಘಾಟನೆ ಮಾಡಿ ಸಂಸದರಿಗೆ ಟಾಂಗ್ ನೀಡಿದರು. ಬಳಿಕ ಪ್ರತಿಕೃತಿಯನ್ನು ಫೈಓವರ್ ನಿಂದ ಕೆಳಗೆ ಬಿಸಾಕುವುದರ ಮೂಲಕ ಸಂಸದರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

ಪ್ರತಿಭಟನೆಯಲ್ಲಿದ್ದ ಕಾಂಗ್ರೆಸ್ ನಾಯಕ ಐವಾನ್ ಡಿಸೋಜ ಮಾತನಾಡಿ, ಇಂತಹ ಸಂಸದರನ್ನು ಪಡೆದ ಮಂಗಳೂರಿನ ಜನತೆಯ ದುರಾದೃಷ್ಟ. ಸಂಸದರು ಇನ್ನೂ ಒಂದು ತಿಂಗಳ ಕಾಲಾವಕಾಶ ಕೇಳಿದ್ದು, ಆ ಡೆಡ್ ಲೈನ್‍ನಲ್ಲೂ ಕಾಮಗಾರಿ ಪೂರ್ಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *