ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಶಮನಕ್ಕೆ ಮಂಗಳೂರಿನ ಜನ ದೇವರ ಮೊರೆ ಹೋಗಿದ್ದಾರೆ.
ಕೊರೊನಾ ವೈರಸ್ ಶಮನಾರ್ಥ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನೂರಾರು ಭಕ್ತರಿಂದ ಧನ್ವಂತರಿ ಜಪ ಪಾರಾಯಣ ಮಾಡಲಾಯಿತು. ರುದ್ರಪಠಣ ಮತ್ತು ವಿಷ್ಣುಸಹಸ್ರನಾಮ ಜನಪಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಜಪ ಪಾರಾಯಣಕ್ಕೂ ಮುನ್ನ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಜಪ ಪಾರಾಯಣದ ಬಳಿಕ ಮಂಜುನಾಥನಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಇಂದು ಮುಂಜಾನೆಯಿಂದಲೇ ಜಪ ಪಾರಾಯಣ ಆರಂಭವಾಗಿದೆ.
ದೇಶದಲ್ಲಿ ಕಿಲ್ಲರ್ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೆ ಏರಿಕ್ಕೆ ಆಗಿದ್ದು, ಇಬ್ಬರು ಬಲಿಯಾಗಿದ್ದಾರೆ. 4 ಸಾವಿರ ಮಂದಿಯ ಮೇಲೆ ನಿಗಾ ಇಡಲಾಗಿದೆ. ಬೆಂಗಳೂರಲ್ಲಿ 9 ಮಂದಿ, ಹಾಸನದಲ್ಲಿ ನಾಲ್ವರು, ದಕ್ಷಿಣ ಕನ್ನಡದಲ್ಲಿ 7 ಮಂದಿ, ಕಲಬುರಗಿಯಲ್ಲಿ ನಾಲ್ವರು, ಉಡುಪಿಯಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಓರ್ವ, ಚಿಕ್ಕಮಗಳೂರಿನಲ್ಲಿ ಇಬ್ಬರು, ಕೊಡಗಿನಲ್ಲಿ ಓರ್ವ ಹಾಗೂ ಬೀದರ್ ನಲ್ಲಿ ಇಬ್ಬರ ಮೇಲೆ ಕೊರೊನಾ ಶಂಕೆ ವ್ಯಕ್ತವಾಗಿದೆ.
ಮಹಾರಾಷ್ಟ್ರದಲ್ಲಿ ಮತೋರ್ವ ಕೊರೊನಾಗೆ ಸಾವನ್ನಪ್ಪಿರುವ ಶಂಕೆ ಇದೆ. ತೆಲಂಗಾಣ, ಛತ್ತೀಸ್‍ಗಢ, ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲಾಗಿದೆ. ಭಾರತ-ಬಾಂಗ್ಲಾದೇಶ, ಭಾರತ-ನೇಪಾಳ, ಭಾರತ-ಭೂತಾನ್, ಭಾರತ-ಮ್ಯಾನ್ಮಾರ್ ಗಡಿ ಕೂಡ ಏಪ್ರಿಲ್ 16 ವರೆಗೂ ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ರಾಜತಾಂತ್ರಿಕರು, ಅಧಿಕಾರಿಗಳಿಗೆ ಮಾತ್ರ ಗಡಿ ದಾಟುವ ಅವಕಾಶ ಮಾಡಿಕೊಡಲಾಗಿದೆ.