ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ತಮ್ಮ ಖದರ್ ತೋರಿಸಿದ್ದಾರೆ. ಸ್ಪಾ, ಯುನಿ ಸೆಕ್ಸ್ ಸಲೂನ್, ಆರ್ಯುವೇದಿಕ್ ಸೆಂಟರ್, ಸ್ಕಿಲ್ ಗೇಮ್ ಸೆಂಟರ್‍ಗಳ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ಗಂಡಸರಿಗೆ ಹೆಣ್ಮಕ್ಕಳಿಂದ ಮಸಾಜ್ ಮಾಡಿಸುವ ದಂಧೆಯನ್ನು ಬಯಲು ಮಾಡಿದ್ದಾರೆ.
ಮೇಯರ್ ದಾಳಿ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಅರೆಬೆತ್ತಲಾಗಿದ್ದ ಕೆಲ ಗ್ರಾಹಕರು ತಮ್ಮ ಕೈಗೆ ಸಿಕ್ಕ ಬಟ್ಟೆಯಿಂದ ಮಾನ ಮುಚ್ಚಿಕೊಂಡು ಓಟ ಕಿತ್ತಿದ್ದಾರೆ.
Advertisement
Advertisement
ಕಳೆದ ವಾರವಷ್ಟೇ ಬಡ ಮಹಿಳೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಇದೀಗ ಮತ್ತೆ ಮುಂದುವರೆದು ನಗರದಲ್ಲಿ ನಡೆಯುತ್ತಿರೋ ಅಡ್ಡ ಕಸುಬಿದಾರರ ಬೆವರಿಳಿಸಿದ್ದಾರೆ. ಮಹಾನಗರದ ಜ್ಯೋತಿ, ಬಿಜೈ ಹಾಗೂ ಬಲ್ಮಠದಲ್ಲಿ ನಡೆಯುತ್ತಿರೋ ನಾಲ್ಕು ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ಬೀಗ ಜಡೆದಿದ್ದಾರೆ. ಅದ್ಯಾವುದೋ ಊರಿಂದ ಬಂದು ತೀಟೆ ತೀರಿಸಿಕೊಳ್ಳೋದಕ್ಕಾಗಿ ಬೆತ್ತಲಾಗೋ ಮಂದಿಯ ಕಚ್ಡಾತನ ಮೇಯರ್ ದಾಳಿ ವೇಳೆ ಬಟಾಬಯಲಾಗಿದೆ.
Advertisement
ಮಂಗಳೂರು ಹುಡುಗಿಯರನ್ನು ನಾನು ಇರೋ ತನಕ ದಂಧೆಗೆ ಇಳಿಸಲಾರೆ. ಇದು ಮುಂಬೈಯಲ್ಲ ಮಂಗಳೂರು ಅಂತಾ ಮೇಯರ್ ಕವಿತಾ ಸನಿಲ್ ಅಕ್ರಮ ದಂಧೆಕೋರರ ವಿರುದ್ಧ ಗುಡುಗಿದ್ದಾರೆ. ಅಕ್ರಮಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗಕೊಡಲ್ಲ ಅಂತ ಹೇಳಿದ್ದಾರೆ.
Advertisement
ಫಳ್ನೀರ್ ರಸ್ತೆಯಲ್ಲಿರೋ ಮೆಂಬರ್ಸ್ ಲಾಂಜ್ ಅನ್ನೋ ಸ್ಕಿಲ್ ಗೇಮ್‍ವೊಂದಕ್ಕೆ ದಾಳಿ ಮಾಡಿದಾಗ ಒಂದೊಮ್ಮೆ ಸ್ಕಿಲ್‍ಗೇಮ್ ಮಾಲಕಿ ಮೇಯರ್ ವಿರುದ್ಧ ಅಬ್ಬರಿಸೋದಕ್ಕೆ ಶುರುವಿಟ್ಟಿದ್ದಾಳೆ. ನಾವು ಪೊಲೀಸರಿಗೆ ಮಾಮೂಲು ಕೊಡ್ತೀವಿ ಅಂತ ಆರೊಪ ಬೇರೆ ಮಾಡ್ತಾಳೆ. ಇಷ್ಟೆಲ್ಲ ಕೇಳ್ತದ್ದಂತೆಯೇ ಮೇಯರ್ ನೇರ ಪೊಲೀಸ್ ಕಮೀಷನರ್ ರವರಿಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ಪೊಲೀಸ್ರು ಬಂದ್ರು ನಾನು ಬೀಗ ಹಾಕಲ್ಲ ಅಂತ ಸ್ಕಿಲ್ ಗೇಮ್ ಮಾಲಕಿ ಹಠಹಿಡಿದಿದ್ದಾಳೆ. ತದನಂತರ ಮಹಿಳಾ ಪೊಲೀಸರನ್ನು ಕರೆಸಿ ಆಕೆಯನ್ನು ವಶಪಡಿಸಿಕೊಂಡ ಘಟನೆಯೂ ನಡೆಯಿತು. ಈ ಹಿಂದೆ ಇದೇ ಸ್ಕಿಲ್ ಗೇಮ್ ಅಡ್ಡೆಗೆ ದಾಳಿ ನಡೆಸಿದಾಗ ಪೊಲೀಸ್ ದಾಳಿ ವಿರುದ್ಧ ಹೈಕೋರ್ಟ್ ನೀಡಿರೋ ತಡೆಯಾಜ್ಞೆಯ ಅಸ್ತ್ರ ಪ್ರಯೋಗಿಸಿದ್ದಳು. ಆ ಕಾರಣಕ್ಕಾಗಿ ನನಗೆ ನಿಮ್ ಟ್ರೇಡ್ ಲೈಸೆನ್ಸ್ ಅಗತ್ಯನೇ ಇಲ್ಲ ಅಂತ ಪಾಲಿಕೆ ಅಧಿಕಾರಿಗಳಿಗೆ ಸ್ಕಿಲ್ ಗೇಮ್ ಮಾಲಕಿ ಸುಜಿತಾ ರೈ ಸವಾಲು ಹಾಕಿದ್ಲು.
ಮೇಯರ್ ರೈಡ್ ವೇಳೆ ಮುಕ್ಕಾಲು ನಗ್ನ ಸ್ಥಿತಿಯಲ್ಲಿದ್ದವರು ತುಂಡು ಬಟ್ಟೆ ಸಿಕ್ರೆ ಸಾಕು ಅಂತ ಎದ್ದು ಬಿದ್ದು ಓಡಿದ್ರು. ಚಡ್ಡಿಯಲ್ಲಿ ಮಲಗಿದ್ದವರಿಗೆ, ಎಣ್ಣೆ ಹಾಕಿ ಮಸಾಜ್ ಮಾಡೋ ಬಿಸ್ನೆಸ್ ಮಾಡೋರಿಗೆ ಸರಿಯಾಗಿ ಕವಿತಾ ಮೇಡಮ್ ಬೆವರು ಇಳಿಸಿದ್ರು.
ಮಂಗಳೂರು ಮಹಾನಗರದೊಳಗೆ ಬೇರುಬಿಟ್ಟಿರೋ ಮಸಾಜ್ ಪಾರ್ಲರ್, ಸ್ಕಿಲ್‍ಗೇಮ್ ಅಡ್ಡೆಗಳಿಗೆ ಅಂಕುಶ ಹಾಕಲು ಲೇಡಿ ಮೇಯರ್ ಟೊಂಕ ಕಟ್ಟಿ ನಿಂತಿದ್ದಾರೆ. ಪೊಲೀಸರು ಮಾಡ್ಬೇಕಾಗಿದ್ದ ಕೆಲಸವನ್ನು ಸಾರ್ವಜನಿಕರ ಮಾಹಿತಿ ಆಧರಿಸಿ ತಾನೇ ಪಾಲಿಕೆ ಅಧಿಕಾರಿಗಳ ಜೊತೆಗೂಡಿ ಮಡೋದಕ್ಕೆ ಶುರುವಿಟ್ಟಿದ್ದಾರೆ. ಈ ಮೂಲಕ ಮೆಯರ್ ಕವಿತಾ ಸನಿಲ್ ಕಡಲತಡಿಯಲ್ಲಿದ್ದು ಕಚ್ಡಾ ದಂಧೆಗೆ ಇಳಿಯೋ ಮಂದಿಗೆ ಸಿಂಹಸ್ವಪ್ನರಾಗ ತೊಡಗಿರುವುದು ಸುಳ್ಳಲ್ಲ.