ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಚಿರತೆಮರಿ ಎಂದೇ ಪ್ರಸಿದ್ಧಿಯಾದ ಶ್ರೀನಿವಾಸ ಗೌಡ ಸಾಧನೆ ಬಳಿಕ ಒಂದೊಂದೇ ರೆಕಾರ್ಡ್ ಗಳು ಹೊರಬರುತ್ತಿವೆ. 1980ರಲ್ಲೇ ಕಂಬಳದ ಪ್ರಸಿದ್ಧ ಓಟಗಾರೊಬ್ಬರು ರಾಷ್ಟ್ರೀಯ ಅಥ್ಲೆಟಿಕ್‍ನಲ್ಲಿ ಭಾಗವಹಿಸಿ ಸತತ 7 ವರ್ಷಗಳ ಕಾಲ ಚಾಂಪಿಯನ್ ಆಗಿ ಹೊರಹೊಮ್ಮಿರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಕಂಬಳದ ಗದ್ದೆಯಲ್ಲಿ ಓಡಿದ ಓಟಗಾರನಿಗೆ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಓಡುವುದು ಕಷ್ಟ ಎಂಬ ವಾದಕ್ಕೆ ಅಪವಾದ ಎಂಬಂತೆ ನಲ್ವತ್ತು ವರ್ಷಗಳ ಹಿಂದೆಯೇ ಸಾಧಿಸಿ ತೋರಿಸಿದ್ದಾರೆ. ಹಾರುವ ಬಂಟ ಎಂದೇ ಪ್ರಸಿದ್ಧಿ ಪಡೆದಿದ್ದ ದಿವಂಗತ ಆನಂದ ಶೆಟ್ಟಿ ಅವರ ರೆಕಾರ್ಡ್ ಈಗ ಬೆಳಕಿಗೆ ಬಂದಿದೆ. 80ರ ದಶಕದಲ್ಲಿ ಕಂಬಳದ ಓಟಗಾರರಾಗಿದ್ದ ಆನಂದ ಶೆಟ್ಟಿ, ರಾಷ್ಟ್ರೀಯ ಅಥ್ಲೆಟಿಕ್‍ನಲ್ಲಿ ಭಾಗವಹಿಸಿ 100 ಮತ್ತು 200 ಮೀಟರ್ ವಿಭಾಗದಲ್ಲಿ ಸತತ 7 ವರ್ಷಗಳ ಕಾಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
Advertisement
Advertisement
ನೇಪಾಳದ ಕಾಠ್ಮಂಡುವಿನಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಚಿನ್ನ ಸೇರಿ ಅನೇಕ ಪ್ರಶಸ್ತಿಗಳಿಗೂ ಆನಂದ ಶೆಟ್ಟಿ ಭಾಜನರಾಗಿದ್ದರು. ಬಂಟ್ವಾಳ ತಾಲೂಕಿನ ಮಾಣಿ ಮೂಲದರಾದ ಆನಂದ ಶೆಟ್ಟಿ ಕಂಬಳದ ಹೆಸರಾಂತ ಓಟಗಾರಾಗಿದ್ದರು. ಕಂಬಳದ ಗದ್ದೆಯಲ್ಲಿ ಮಿಂಚಿನ ಓಟದ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಅವರ ಪ್ರತಿಭೆ ಗಮನಿಸಿ ರಾಷ್ಟ್ರೀಯ ಅಥ್ಲೆಟಿಕ್‍ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕ ಬಳಿಕ ಶಿಖರದಷ್ಟು ಸಾಧನೆ ಮಾಡಿದ್ದರು.
Advertisement
ಕೆಸರು ಗದ್ದೆಯಲ್ಲಿ ಓಡಿದ್ದ ಆನಂದ ಶೆಟ್ಟಿ ಸಿಂಥೆಟಿಕ್ ಟ್ರ್ಯಾಕ್‍ನಲ್ಲೂ ಸಾಧನೆ ಮಾಡಿ ತೋರಿಸಿದ್ದರು. ಕಂಬಳದ ಓಟಗಾರರ ಸಾಮಥ್ರ್ಯದ ಬಗ್ಗೆ ಚರ್ಚೆಯಾಗುತ್ತಿರುವ ಸಂಧರ್ಭದಲ್ಲೇ ಕರಾವಳಿಯ ಹಳೇ ಹುಲಿಯ ಸಾಧನೆ ಮುನ್ನಲೆಗೆ ಬಂದಿದೆ. ಕಂಬಳದ ಗದ್ದೆಯಲ್ಲಿ ಓಡಿದವರು ಸಿಂಥೆಟಿಕ್ ಟ್ಯ್ಯಾಕ್‍ನಲ್ಲೂ ಓಡಬಹುದು ಎಂಬ ವಾದಕ್ಕೆ ಬಲ ಸಿಕ್ಕಿದೆ. ಕಂಬಳದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡ, ಸಿಂಥೆಟಿಕ್ ಟ್ಯ್ಯಾಕ್‍ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ದೇಶದ ಜನರ ಆಸೆಗೆ ಪುಷ್ಠಿ ಬಂದಿದೆ.