ಮಂಗಳೂರು: ಒಂದು ಲಾಂಗ್ ಜರ್ನಿ ಕಾರಲ್ಲೋ, ಬೈಕ್‍ನಲ್ಲೋ ಹೋಗುವುದು ಎಂದ್ರೆ ಬೋರ್ ಎನ್ನುವವರು ಇದ್ದಾರೆ. ಇನ್ನು ಕೆಲವರು ಬೈಕ್‍ನಲ್ಲಿ ಲಾಂಗ್ ಡ್ರೈವ್ ಹೋಗುವುದು, ಕಾರ್‍ನಲ್ಲಿ ಪ್ರವಾಸಿ ತಾಣಗಳಿಗೆ ಫ್ಯಾಮಿಲಿ ಟೂರ್ ಮಾಡೋದು ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಜರ್ಮನ್ ಮೂಲದ ದಂಪತಿ ಕಾರಿನಲ್ಲೇ ವಿಶ್ವ ಪರ್ಯಟನೆ ಮಾಡುತ್ತಾ ಕಡಲ ನಗರಿ ಮಂಗಳೂರು ತಲುಪಿದ್ದಾರೆ.
ಜರ್ಮನಿಯ ಉದ್ಯಮಿ ಪೀಟರ್ ಹಾಗೂ ಮೂಳೆ ಶಾಸ್ತ್ರಜ್ಞೆ ಡಾ.ಅಲೋನಾ ದಂಪತಿ ತಮ್ಮ ಬೆನ್ಜ್ ಕಾರಿನಲ್ಲಿ ವಿಶ್ವ ಪರ್ಯಟನೆಗೆ ಕೈಗೊಂಡಿದ್ದಾರೆ. ವಿವಿಧ ದೇಶಗಳ ಜನರ ಜೀವನ ಶೈಲಿ, ಸಂಸ್ಕೃತಿ, ವೈವಿಧ್ಯಗಳನ್ನು ತಿಳಿಯುವ ಉದ್ದೇಶದಿಂದ ಈ ದಂಪತಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ.
Advertisement
Advertisement
ಪೀಟರ್ ದಂಪತಿ 2019ರ ಮೇ 1ರಂದು ಪರ್ಯಟನೆ ಆರಂಭಿಸಿದ್ದು, ಈಗ ಮಂಗಳೂರು ತಲುಪಿದ್ದಾರೆ. ಈಗಾಗಲೇ ರಷ್ಯಾ, ಪೋಲೆಂಡ್, ಐಸ್‍ಲ್ಯಾಂಡ್, ಮಂಗೋಲಿಯಾ, ಕಜಕಿಸ್ಥಾನ, ಉಜ್ಜೆಕಿಸ್ಥಾನ, ತರ್ಗಿಸ್ಥಾನ, ಇರಾನ್, ಬಲೂಚಿಸ್ಥಾನ್ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಜೋಡಿ ಕಳೆದ ನವೆಂಬರ್ ನಲ್ಲಿ ಸಾಂಸ್ಕೃತಿಕ ವೈಭವದ ಭಾರತಕ್ಕೆ ಆಗಮಿಸಿದ್ದು, ದೆಹಲಿ, ಆಗ್ರಾ, ತಾಜ್‍ಮಹಲ್‍ಗೆ ಭೇಟಿ ನೀಡಿ ಮಂಗಳೂರಿಗೆ ಆಗಮಿಸಿದ್ದಾರೆ.
Advertisement
ಪೀಟರ್ ಅವರು ತಮ್ಮ ಕಾರನ್ನು ಪುಟ್ಟ ಮನೆಯಾಗಿಸಿಕೊಂಡಿದ್ದು, ಅದರಲ್ಲೇ ಕೈ ತೊಳೆಯುವ ಸಿಂಕ್ ಕೂಡ ಇದೆ. ಕಾರಿನ ಮೇಲ್ಬಾಗವನ್ನು ತೆರೆದು ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ತಾವು ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ ಅಲ್ಲಿನ ಪ್ರಮುಖರ ಸಹಿಯನ್ನು ಕಾರಿ ಮೇಲೆ ಪಡೆದುಕೊಳ್ಳುತ್ತಾರೆ. ಪೀಟರ್ ಹಾಗೂ ಡಾ.ಅಲೋನಾ ದಂಪತಿ ಮಂಗಳೂರಿನ ಜನ, ಪರಿಸರ, ಸಂಸ್ಕೃತಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇಳಿ ವಯಸ್ಸಿನ ಈ ದಂಪತಿಯ ಸಾಹಸಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳಲೇ ಬೇಕು.