ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಮೇಲೆ ಹಲ್ಲೆ

Public TV
1 Min Read
Rajani Shetty

ಮಂಗಳೂರು: ಬೀದಿ ನಾಯಿಗಳ ಆಶ್ರಯದಾತೆಯಾಗಿರುವ ಮಂಗಳೂರಿನ ರಜನಿ ಶೆಟ್ಟಿ (Rajani Shetty) ಮೇಲೆ ನೆರೆಮನೆಯವರಿಂದಲೇ ಹಲ್ಲೆ ನಡೆದಿದೆ. ಗಾಯಗೊಂಡಿರುವ ಅವರು ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

 

rajani shetty 1

ಪ್ರತಿ ನಿತ್ಯ ಅಸಂಖ್ಯಾತ ಬೀದಿ ನಾಯಿಗಳಿಗೆ (Dog) ಆಹಾರ ನೀಡುವ ರಜನಿ ಶೆಟ್ಟಿ ಹಾಗೂ ನೆರೆಮನೆಯ ಮಂಜುಳಾ ನಡುವೆ ನಾಯಿಗಳ ವಿಚಾರವಾಗಿಯೇ ಪದೇ ಪದೇ ಜಗಳವಾಗುತ್ತಿತ್ತು. ಸೋಮವಾರ ಮಂಜುಳಾ ರಜನಿ ಅವರ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ನಿಗದಿಗಿಂತ ಚುನಾವಣೆಯಲ್ಲಿ ಅಧಿಕ ವೆಚ್ಚ – ಇಬ್ಬರೂ ಬಿಜೆಪಿ ನಾಯಕರಿಗೆ ನೋಟಿಸ್

ಘಟನೆಯಿಂದ ರಜನಿ ಶೆಟ್ಟಿ ಅವರ ಕೈಗೆ ಗಾಯಗಳಾಗಿವೆ. ಈ ಹಿನ್ನೆಲೆ ಅವರು ನಗರದ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಬಗ್ಗೆ ರಜನಿ ಶೆಟ್ಟಿ ಮಂಜುಳಾ ವಿರುದ್ಧ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಿಂದ ಸಿಂಡಿಕೇಟ್ ವರ್ಗಾವಣೆ ದಂಧೆ: ಕುಮಾರಸ್ವಾಮಿ ಬಾಂಬ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article