ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನಾದ್ಯಂತ ಹೆಚ್ಚುವರಿ ರಜೆ ನೀಡುವಂತೆ ಶಿಕ್ಷಣ ಇಲಾಖೆ (Education Department) ಆದೇಶ ಹೊರಡಿಸಿದೆ.
Advertisement
ಸೆ.28 ರಿಂದ ಅಕ್ಟೋಬರ್ 16 ರವರೆಗೂ ರಜೆ ನೀಡುವಂತೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮಂಗಳೂರು ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಡ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನಗಳ ಕಾಲ ರಜೆ ಘೋಷಿಲಾಗಿದೆ.
Advertisement
Advertisement
ಹೆಚ್ಚುವರಿ ರಜೆಯನ್ನು ನವೆಂಬರ್ ತಿಂಗಳ ನಾಲ್ಕು ಶನಿವಾರ ಹಾಗೂ ಎರಡು ಭಾನುವಾರ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ
Advertisement
ದಸರಾ (Mangaluru Dasara 2022) ನಡೆಯಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ (Kudroli Gokarnanatha Temple) ದಲ್ಲಿ ದಸರಾಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆದಿದೆ. ಒಂಬತ್ತು ದಿನಗಳ ಕಾಲ ನವದುರ್ಗೆಯರ ಆರಾಧನೆ ಹಾಗೂ ದಸರಾಕ್ಕೆ ಸೆಪ್ಟೆಂಬರ್ 26 ರಂದು ಅದ್ಧೂರಿ ಚಾಲನೆ ದೊರೆಯಲಿದೆ. ದಸರಾಕ್ಕಾಗಿ ನಡೆಯಬೇಕಾದ ಸುಣ್ಣಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರ ಅಲಂಕಾರ, ಸಿದ್ಧತೆಗಳು ಪೂರ್ಣಗೊಂಡಿದೆ.
ಸೆಪ್ಟೆಂಬರ್ 26 ರ ಸೋಮವಾರ ಮುಂಜಾನೆ 11.45ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಸುಂದರ ಕಲಾಕೃತಿಗಳೊಂದಿಗೆ ನಿರ್ಮಾಣವಾದ ಸಭಾಂಗಣದಲ್ಲಿ ಗಣಪತಿ, ಶಾರದಾ ಮಾತೆ, ನವದುರ್ಗೆಯರು, ಆದಿಮಾಯೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರೊಂದಿಗೆ ನವರಾತ್ರಿ ಹಾಗೂ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಈ ಬಾರಿಯ ದಸರಾಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರನ್ನು ಆಹ್ವಾನಿಸಿದ್ದು ಬರುವ ನಿರೀಕ್ಷೆ ಇದೆ.