ನವದುರ್ಗೆಯರ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮಂಗಳೂರು ದಸರಾಕ್ಕೆ ತೆರೆ

Public TV
2 Min Read
MNG DASARA 8

– ಕೊರೊನಾ ಕಾರಣದಿಂದ ವೈಭವ ಮೆರವಣಿಗೆ ರದ್ದು

ಮಂಗಳೂರು: ರಾಜ್ಯದಲ್ಲೇ ಮೈಸೂರು ಬಳಿಕ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಕೋವಿಡ್ ಗೈಡ್‍ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿತು.

MNG DASARA 6

ಮಂಗಳೂರಿನ ಕುದ್ರೋಳಿಯಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನವರಾತ್ರಿಯಂದು ನಡೆಯುವ ಅದ್ಧೂರಿ ದಸರಾ ಈ ವರ್ಷ ಕೂಡ ಕಳೆದ ವರ್ಷದಂತೆ ಸರಳ ದಸರಾವಾಗಿತ್ತು. ನಿನ್ನೆ ರಾತ್ರಿ ದಸರಾ ಕಾರ್ಯಕ್ರಮಗಳು ಸಂಪೂರ್ಣವಾಗಿ ಮುಗಿದು ಈ ಬಾರೀಯ ನವರಾತ್ರಿ ಸಂಪನ್ನಗೊಂಡಿದೆ. ನವರಾತ್ರಿ ನವದುರ್ಗೆಯರ ಕಳೆಗಟ್ಟಿದ ಮೂರ್ತಿಗಳು, ಸರಳ ದಸರಾವಾದ್ರು ಮೂರ್ತಿಗಳ ಅಂದ ಚೆಂದ, ಮಂದಹಾಸ, ಸುಂದರ ವೈಭವಕ್ಕೇನು ಕೊರತೆ ಇರಲಿಲ್ಲ. ಇದು ಶಾರದ ಮೂರ್ತಿ. ಈ ಮೂರ್ತಿಯ ಲಕ್ಷಣ ಕಳೆಯನ್ನು ನೋಡಿ. ಕಲಾವಿದನ ಕೈಯಲ್ಲಿ ಸೃಷ್ಠಿಯಾದ ಮೂರ್ತಿಯ ಅಂದ-ಚೆಂದ, ತಾಯಿಯ ಸುಂದರ ಮೊಗದಲ್ಲಿನ ಮಂದಸ್ಮಿತೆ ಎಲ್ಲರ ಭಕ್ತಿಯನ್ನು ಇಮ್ಮಡಿಗೊಳಿಸುತ್ತೆ. ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!

MNG DASARA 5

ಕೈಯಲ್ಲಿ ವೀಣೆ ಹಿಡಿದು ಕುಳಿತಿದ್ರೆ, ಸಾಕ್ಷಾತ್ ಶಾರದಾಂಬೆಯೇ ಪ್ರತ್ಯಕ್ಷವಾಗಿ ದರ್ಶನ ನೀಡಿ ಸಂಚರಿಸುತ್ತಿದ್ದಾಳೆನೊ ಅಂತಾ ಅನ್ನಿಸದೇ ಇರಲ್ಲ. ಶಾರದಾ ದೇವಿ ಮೂರ್ತಿ ಮಾತ್ರವಲ್ಲ. ಇನ್ನು ನವ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿ ದೇವಿಗಳು ಕೂಡ ಅಷ್ಟೆ ರೂಪಲಾವಣ್ಯವಾಗಿರುತ್ತೆ. ಅತ್ಯಂತ ವೈಭವದಿಂದ ನಡೆಯುತ್ತಿದ್ದ ಮಂಗಳೂರು ದಸರಾ ಈ ಬಾರಿ ಸರಳವಾಗಿ ನಡೆದಿದೆ. ಕುದ್ರೋಳಿ ದೇವಸ್ಥಾನದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಮಹೋತ್ಸವಕ್ಕೆ ತಡರಾತ್ರಿ ತೆರೆಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು.  ಇದನ್ನೂ ಓದಿ: ಮಂಗಳೂರಿನಲ್ಲಿ ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ನಿಗಾ

MNG DASARA 4

ಈ ಹಿಂದಿನ ವರ್ಷಗಳಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯುತ್ತಿತ್ತು. ರಾತ್ರಿ ಪೂರ್ತಿ ಅದ್ದೂರಿ ಟ್ಯಾಬ್ಲೋ ಮೂಲಕ ನಗರ ಪ್ರದಕ್ಷಿಣೆ ಮಾಡಿ ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಿ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

MNG DASARA

ಕುದ್ರೋಳಿ ಹಾಗೂ ಇನ್ನಿತರ ಕಡೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಹುಲಿ ಕುಣಿತಕ್ಕೆ ಅವಕಾಶ ನೀಡಲಾಗಿತ್ತು. ಕರಾವಳಿಯ ಹುಲಿಕುಣಿತ ದಸರಾದ ಮುಖ್ಯ ಆಕರ್ಷಣ ಕೇಂದ್ರವಾಗಿತ್ತು. ಇನ್ನು 9 ದಿನಗಳ ಕಾಲ ಪೂಜಿಸಲ್ಪಟ್ಟ ನವದುರ್ಗೆಯರು ಮತ್ತು ಶಾರದಾ ಮೂರ್ತಿ ವಿಸರ್ಜನೆಯಾಗೋದ್ರು ಮೂಲಕ ಈ ಬಾರೀಯ ದಸರಾ ಸಂಪನ್ನವಾಯಿತು.

MNG DASARA 1

Share This Article
Leave a Comment

Leave a Reply

Your email address will not be published. Required fields are marked *