– ಮಗಳ ಮಾಜಿ ಪ್ರಿಯಕರನಿಂದ ಗುಂಡು
– ಪೊಲೀಸ್ ಕಾರ್ಯಾಚರಣೆಯಲ್ಲಿ ಆರೋಪಿ ಬಲಿ
ಮಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳೂರಿನ ಬಜ್ಪೆ ಮೂಲದ ದಂಪತಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸಿಲಿಕಾನ್ ವ್ಯಾಲಿಯ ಟೆಕ್ ಎಕ್ಸಿಕ್ಯೂಟಿವ್, ನರೇನ್ ಪ್ರಭು ಮತ್ತು ರಾಯನ್ ಸಿಕ್ವೇರಾ ಪ್ರಭು ಎನ್ನುವ ದಂಪತಿಯನ್ನು ಪುತ್ರಿ ರಾಶೇಲ್‍ಳ ಮಾಜಿ ಪ್ರಿಯಕರ ಮಿರ್ಜಾ ಟಾಟ್ಲರ್ ಶೂಟ್ ಮಾಡಿ ಕೊಂದಿದ್ದಾನೆ.
Advertisement
Advertisement
ನಡೆದಿದ್ದೇನು?: ಮೂಲತಃ ಮಂಗಳೂರಿನ ಬಜ್ಪೆ ನಿವಾಸಿ ರಾಯನ್ ಸಿಕ್ವೇರಾ ಕುಟುಂಬ ಮುಂಬೈನ ಬಾಂದ್ರಾದಲ್ಲಿ ನೆಲೆಸಿತ್ತು. ಆದ್ರೆ ಮಗಳು ಅಮೆರಿಕಾದಲ್ಲಿದ್ದಳು. ಹೀಗಾಗಿ ಮಗಳನ್ನು ನೋಡಲೆಂದು ನರೇನ್ ಪ್ರಭು ಹಾಗೂ ರಾಯನ್ ಸಿಕ್ವೇರಾ ಅಮೆರಿಕಕ್ಕೆ ತೆರಳಿದ್ದರು. ಅಂತೆಯೇ ಸ್ಯಾನ್ ಜೋಸ್‍ನಲ್ಲಿರುವ ಮನೆಯಲ್ಲಿದ್ದ ವೇಳೆ ಮನೆಗೆ ನುಗ್ಗಿದ ಮಿರ್ಜಾ ಟಾಟ್ಲರ್, ಮೊದಲು ರಾಶೆಲ್ ತಂದೆ ಮೇಲೆ ಗುಂಡು ಹಾರಿಸಿದ್ದು, ಬಳಿಕ ಹೊರ ಬಂದ ತಾಯಿಯ ಮೇಲೂ ಗುಂಡು ಹಾರಿಸಿ ಕೊಲೆಗೈದಿದ್ದಾನೆ. ಅಲ್ಲದೇ ಅಲ್ಲೆ ಇದ್ದ ರಾಶೆಲ್‍ಳ 13 ವರ್ಷದ ತಮ್ಮನನ್ನು ಒತ್ತೆಯಾಳಾಗಿ ಇರಿಸಿಕೊಂಡ. ಬಳಿಕ ತಮ್ಮನ ಫೋನ್‍ನಿಂದ ಮಾಜಿ ಪ್ರಿಯತಮೆ ರಾಶೆಲ್‍ಗೆ ಫೋನ್ ಮಾಡಿದ್ದನು.
Advertisement
Advertisement
ಇದರಿಂದ ಆತಂಕಗೊಂಡ ರಾಶೆಲ್ ಪೊಲಿಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಬಂದ ಸಂದರ್ಭ ಪೊಲೀಸರಿಗೂ ಗುಂಡು ಹಾರಿಸಲು ಯತ್ನಿಸಿದ್ದ. ಆರೋಪಿ ಸುಮಾರು 2 ಗಂಟೆ ಪೊಲೀಸರನ್ನು ಸತಾಯಿಸಿದ್ದಾನೆ. ಕೊನೆಗೆ ಶರಣಾಗಲು ಒಪ್ಪದ ಮಿರ್ಜಾ ಟಾಟ್ಲರ್‍ನನ್ನು ಕಿಟಕಿ ಮೂಲಕ ಶೂಟ್ ಮಾಡಿ ಪೊಲೀಸರು ಹತ್ಯೆ ಮಾಡಿದ್ದಾರೆ. ಸದ್ಯ ರಾಯನ್ ಸಿಕ್ವೇರಾ ಅವರ ತಾಯಿಯ ಮನೆ ಮಂಗಳೂರಿನಲ್ಲಿ ಸಾವಿನ ಸುದ್ದಿ ಇಂದು ಗೊತ್ತಾಗಿ ನೀರಸ ಮೌನ ಆವರಿಸಿದೆ.
ಪೊಲೀಸರ ಪ್ರಕಾರ ಮಿರ್ಜಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಮೇ ನಾಲ್ಕರಂದು ಈ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ರಾಶೆಲ್ ಇರಲಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.