ಮಂಗಳೂರು: ಮಂಗಳೂರಿನ ಮಹಿಳೆಗೆ ಕೊರೊನಾ ಸೋಂಕು ತಗುಲಿರೋದು ಇಂದು ದೃಢಪಟ್ಟಿದೆ. ಪಾಶ್ರ್ವವಾಯು ಪೀಡಿತರಾಗಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೋಳೂರಿನ ಮಹಿಳೆಗೆ ಸೋಂಕು ತಗಲಿದೆ.
ಏಪ್ರಿಲ್ 20ರಂದೇ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರೂ, ಅದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಮಹಿಳೆಗೆ ಎರಡು ದಿನಗಳ ಹಿಂದೆ ಸೋಂಕು ತಗುಲಿತ್ತು. ಆಕೆಯ ಸಂಪರ್ಕದಿಂದ ಈಗ ಬೋಳೂರಿನ ಮಹಿಳೆಗೂ ಸೋಂಕು ತಗಲಿದೆ. ಹೀಗಾಗಿ ಮಂಗಳೂರು ನಗರದ ಬೋಳೂರಿನಲ್ಲಿ ಸೋಂಕಿತೆಯ ಮನೆ ಇರುವ 200 ಮೀಟರ್ ಆಸುಪಾಸಿನಲ್ಲಿ ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ.
Advertisement
Advertisement
ಈ ಪರಿಸರದಲ್ಲಿ 135 ಮನೆಗಳಿದ್ದು ಸುಮಾರು 650 ಮಂದಿ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ. ಇದಲ್ಲದೆ ಮಹಿಳೆಯ ಮನೆಯಲ್ಲಿದ್ದ ಐದು ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದೇ ವೇಳೆ ಬೋಳೂರಿನಿಂದ ಐದು ಕಿಮೀ ವ್ಯಾಪ್ತಿಯಲ್ಲಿ ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಪೊಲೀಸರು ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ನಿರ್ಬಂಧಿಸಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 22ಕ್ಕೇರಿದ್ದು ಜಿಲ್ಲೆಯನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ.