– ಆರೈಕೆ ಮಾಡುತ್ತಿದ್ದ ಮಗನಿಗೂ ಸೋಂಕು
ಮಂಗಳೂರು: ಕೊರೊನಾ ಸೋಂಕಿತ ವೃದ್ಧೆಯ ಸಾವಿನ ಬಳಿಕ ಕೊರೊನಾ ಹಾಟ್‍ಸ್ಪಾಟ್ ಆಗಿ ಬದಲಾಗಿರುವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ತಗಲಿದೆ.
ವೃದ್ಧೆಯ ಪಕ್ಕದ ಬೆಡ್ ನಲ್ಲಿದ್ದ 80 ವರ್ಷದ ತಾಯಿ ಮತ್ತು ಆಕೆಯ ಆರೈಕೆಗೆ ಬಂದಿದ್ದ 45 ವರ್ಷದ ಮಗನಿಗೆ ಸೋಂಕು ಕಾಣಿಸಿಕೊಂಡಿದೆ. ಇವರು ಮಂಗಳೂರಿನ ಶಕ್ತಿನಗರದ ನಿವಾಸಿಗಳಾಗಿದ್ದು, ಆ ಏರಿಯಾವನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲಾಗಿದೆ.
Advertisement
Advertisement
ನರ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ವತಃ ಮಗನೇ ಜೊತೆಗಿದ್ದು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಇವರಿಬ್ಬರಿಗೂ ಸೋಂಕು ತಗಲಿದ್ದು ಮತ್ತೊಂದು ರೀತಿಯ ಆತಂಕಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 23ರಂದು ಇದೇ ಆಸ್ಪತ್ರೆಯಲ್ಲಿದ್ದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದರು. ಆ ಬಳಿಕ ಖಾಸಗಿ ಆಸ್ಪತ್ರೆಯನ್ನು ವಶಕ್ಕೆ ಪಡೆದು ಎಲ್ಲ ಸಿಬಂದಿ ಮತ್ತು ರೋಗಿಗಳನ್ನು ತಪಾಸಣೆಗೆ ಒಳಪಡಿಸಿತ್ತು. ಇದನ್ನು ಓದಿ: ತಾಯಿ, ಮಗನಿಗೆ ಕೊರೊನಾ – ಮಂಗ್ಳೂರು ನಗರ ಸೀಲ್ ಡೌನ್
Advertisement
Advertisement
ಮೃತ ಪಟ್ಟ ಸೋಂಕಿತೆಯ ಸಂಪರ್ಕದಲ್ಲಿ ಇದ್ದ 190ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಈಗ ದಿನದಿಂದ ದಿನಕ್ಕೆ ಆಸ್ಪತ್ರೆಯಲ್ಲಿ ಇದ್ದವರಿಗೆ ಕಪರೊನಾ ಪಾಸಿಟಿವ್ ಬಂದಿದೆ. ನಿನ್ನೆಯಷ್ಟೆ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಮೂಲಕ ಆಸ್ಪತ್ರೆಗೆ ಬಂದು ಹೋದವರಿಗೆಲ್ಲ ಆತಂಕ ಶುರುವಾಗಿದೆ.