ಮಂಗಳೂರು: ತುರ್ತು ಔಷಧಕ್ಕಾಗಿ ವೃದ್ಧೆಯೊಬ್ಬರು ಬರೋಬ್ಬರಿ 15 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶ ಕೊಲ್ಲಮೊಗ್ರು ಗ್ರಾಮದ ಅಜ್ಜಿ ಬರೋಬ್ಬರಿ 15 ಕಿ.ಮೀ. ನಡೆದುಕೊಂಡು ಬಂದಿದ್ದಾರೆ. ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವಾಹನದ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿದೆ. ಔಷಧಿ ಮುಗಿದ ಪರಿಣಾಮ ಅಜ್ಜಿ ಕೊಲ್ಲಮೊಗ್ರು ಗ್ರಾಮದಿಂದ 15 ಕಿ.ಮೀ. ದೂರದಲ್ಲಿರುವ ಗತ್ತಿಗಾರಿಗೆ ಬಂದಿದ್ದಾರೆ.
Advertisement
Advertisement
ಕಾಲ್ನಡಿಗೆಯಲ್ಲಿ ಬಂದಿದ್ದರಿಂದ ತುಂಬಾ ಬಳಲಿದ್ದ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಔಷಧಕ್ಕಾಗಿ ಬಂದಿರುವ ವಿಷಯ ತಿಳಿದು ಬಂದಿದೆ. ಬಳಿಕ ಗ್ರಾ.ಪಂ ಅಧ್ಯಕ್ಷ, ಪಿಡಿಒ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಸ್ಥಳಕ್ಕೆ ಆಗಮಿಸಿ ವೃದ್ಧೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ.