ಮಂಗಳೂರು: ಕೊರೊನಾ ಭೀತಿಯಿಂದ ಜಗತ್ತು ನಲುಗಿದ್ದು, ಇಡೀ ವ್ಯಾಪಾರ ವಹಿವಾಟುಗಳು ಬಿದ್ದು ಹೋಗಿದೆ. ಹೋಟೆಲ್ ಗಳಲ್ಲಿ ಜನ ತಿನ್ನೋದು ಕಡಿಮೆ ಮಾಡಿ, ಮನೆ ಊಟದ ಕಡೆ ಮುಖ ಮಾಡಿದ್ದಾರೆ.
ತಂಪು ಪಾನೀಯಗಳ ಬೇಡಿಕೆ ಕುಸಿದು ವ್ಯಾಪಾರ ತುಂಬಾ ಡಲ್ ಆಗಿದೆ. ಆದರೆ ಕಡಲತಡಿ ಮಂಗಳೂರಿನಲ್ಲಿ ಎಳನೀರಿಗೆ ಹಾಗೂ ಮೀನು ಮಾಂಸಕ್ಕೆ ಮಾತ್ರ ಭರ್ಜರಿ ಬೇಡಿಕೆ ಇದೆ. ಕರಾವಳಿ ಈಗಾಗಲೇ ಉಷ್ಣಾಂಶ ಏರಿಕೆ ಆಗಿದ್ದು, ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಕೊರೊನಾ ಯಾವಾಗ ಆತಂಕ ಸೃಷ್ಟಿ ಮಾಡಿತೋ ಅಂದಿನಿಂದ ಜನರು ದೇಹ ತಣಿಸಲು ಎಳನೀರಿನ ಮೊರೆ ಹೋಗುತ್ತಿದ್ದಾರೆ.
ಪ್ರಸ್ತುತ ಮಂಗಳೂರಿನಲ್ಲಿ 30 ರಿಂದ 35 ರೂಪಾಯಿಗೆ ಎಳನೀರು ಲಭ್ಯವಾಗುತ್ತಿದ್ದು, ಮುಂದೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಜನ ಕೊರೊನಾದ ಹೆದರಿಕೆಯಿಂದ ಕೋಳಿ ಮಾಂಸ ತಿನ್ನುವುದು ಬಿಟ್ಟ ಮೇಲೆ ಮೀನಿನ ಮಾಂಸಕ್ಕೆ ವಿಪರೀತ ಬೇಡಿಕೆ ಹೆಚ್ಚಾಗಿದೆ. ಒಂದೆಡೆ ಮತ್ಸ್ಯ ಕ್ಷಾಮ ಮತ್ತೊಂದು ಕಡೆ ಬೇಡಿಕೆ ಹೆಚ್ಚಳ ಇವುಗಳ ಪರಿಣಾಮ ಮೀನಿನ ಬೆಲೆ ಕೂಡ ಗಮನಕ್ಕೆ ಏರಿದೆ.