– ಕರಾವಳಿಯಲ್ಲಿ ಐದಕ್ಕೇರಿದ ಕೊರೊನಾ ಪೀಡಿತರ ಸಂಖ್ಯೆ
ಮಂಗಳೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ ನಾಲ್ಕು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಹಿಂದಿನ ಒಂದು ಕೊರೊನಾ ಪಾಸಿಟಿವ್ ಪ್ರಕರಣವೂ ಸೇರಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಐದಕ್ಕೇರಿದೆ.
ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಭಟ್ಕಳ ಮೂಲದ 22 ವರ್ಷದ ವ್ಯಕ್ತಿಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಇಂದು ಒಂದೇ ದಿನ ನಾಲ್ಕು ಕೊರೊನಾ ಪ್ರಕರಣಗಳು ಪಾಸಿಟಿವ್ ಬಂದಿವೆ. ಇಂದು ಪಾಸಿಟಿವ್ ಬಂದು 4 ಜನರಲ್ಲಿ ಮೂವರು ಮಂಗಳೂರಿನ ಮೊದಲ ಪ್ರಕರಣದ ವ್ಯಕ್ತಿಯ ಜೊತೆಯಲ್ಲಿ ಒಂದೇ ವಿಮಾನದಲ್ಲಿ ಬಂದವರಾಗಿದ್ದಾರೆ. ಇದರ ಜೊತೆ ಮಾರ್ಚ್ 19ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿದ್ದ ಓರ್ವನಿಗೂ ಸೋಂಕು ಪತ್ತೆಯಾಗಿದೆ.
Advertisement
Advertisement
ಮಾರ್ಚ್ 20ರಂದು ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಮೂವರು ಬಂದಿದ್ದಾರೆ. ಈ ಮೂವರಲ್ಲಿ ಮೊದಲಿಗೆ ಭಟ್ಕಳ ಮೂಲದ ವ್ಯಕ್ತಿಗೆ ಮೊದಲು ಸೋಂಕು ಪತ್ತೆಯಾಗಿತ್ತು. ನಂತರ ಇಂದು ಅವರ ಜೊತೆ ಬಂದ ಮೂವರಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಮೂವರನ್ನು ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊತ್ತೋರ್ವ ಸೋಂಕಿತ ರೋಗಿಗೆ ಕೆಂಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಇಂದು ಪಾಸಿಟಿವ್ ಬಂದಿರುವ ನಾಲ್ಕು ಪ್ರಕರಣದಲ್ಲಿ ಎಲ್ಲಾ ಸೋಂಕಿತರು ಕೇರಳದವರು ಆಗಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಮತ್ತು ಮೂವರು ಗಂಡಸರು ಇದ್ದಾರೆ. ಸೋಂಕಿತ ಮಹಿಳೆಗೆ 70 ವರ್ಷ ಹಾಗೂ ಗಂಡಸರಿಗೆ ಕ್ರಮವಾಗಿ 32, 47 ಮತ್ತು 23 ವರ್ಷವಾಗಿದೆ.