ನವದೆಹಲಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Mangaluru Cooker Bomb Explosion Case) ಸಂಚು ರೂಪಿಸಿದ್ದ ಐಸಿಸ್ ಉಗ್ರ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ (Shivamogga) ಮೂಲದ ಅರಾಫತ್ ಅಲಿಯನ್ನು (Arafath Ali ) ರಾಷ್ಟ್ರೀಯ ತನಿಖಾದ ಸಂಸ್ಥೆ(NIA) ಬಂಧಿಸಿದೆ.
ಕೀನ್ಯಾ ರಾಜಧಾನಿ ನೈರೋಬಿಯಿಂದ ಆತ ದೆಹಲಿಗೆ (Delhi) ಬಂದಿಳಿಯುತ್ತಿದ್ದಂತೆ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಅಲಿ 2020 ರಿಂದ ಐಸಿಸ್ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಭಾರತದಲ್ಲಿ ನೆಲೆಸದೇ ಇದ್ದರೂ ಐಎಸ್‌ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ. ಇದನ್ನೂ ಓದಿ: ಗಗನ್, ಧನಂಜಯ್, ಚೈತ್ರಾ ಕುಂದಾಪುರ ಪರಿಚಯವಾಗಿದ್ದು ಹೇಗೆ?: ಡೀಲ್ ಕೇಸ್‍ನ ಸಂಪೂರ್ಣ ಕಥೆ ಬಿಚ್ಚಿಟ್ಟ ಚನ್ನನಾಯ್ಕ್
Advertisement
Advertisement
ಐಸಿಸ್ ಸಂಘಟನೆಗೆ ಮುಸ್ಲಿಂ (Muslim) ಯುವಕರನ್ನು ನೇಮಿಸುವ ಕೆಲಸ ಈತ ಮಾಡುತ್ತಿದ್ದ. ನಂತರ ವಿವಿಧ ವಿಚಾರಗಳನ್ನು ಅವರ ತಲೆಗೆ ತುಂಬಿ ತೀವ್ರವಾದಿಗಳನ್ನಾಗಿ ಮಾಡುತ್ತಿದ್ದ ವಿಚಾರ ತನಿಖೆಯತಿಂದ ಬೆಳಕಿಗೆ ಬಂದಿತ್ತು.
Advertisement
ಶಿವಮೊಗ್ಗ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣ (Shivamogga Trial Blast Case) ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಸಂಚನ್ನು ಈತನೇ ರೂಪಿಸಿದ್ದ. ಮಂಗಳೂರು ಸ್ಪೋಟದಲ್ಲಿ ಬಂಧಿತನಾಗಿರುವ ಶಾರೀಕ್ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕುಕ್ಕರ್ ಬಾಂಬ್ ಇಡಲು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಅಲಿ ಈ ಎಲ್ಲ ಪ್ರಕರಣದ ಆರೋಪಿಗಳ ಜೊತೆ ನೇರ ಸಂಪರ್ಕದಲ್ಲಿದ್ದ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!
Advertisement
2020 ರ ಮಂಗಳೂರು ಗೋಡೆಯ ಮೇಲೆ ಬರಹ ಪ್ರಕರಣದಲ್ಲೂ ಆಲಿಯ ಪಾತ್ರವಿದೆ. ಆತನ ಸೂಚನೆಯ ಮೇರೆಗೆ ಆರೋಪಿಗಳಾದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಅವರುಗೋಡೆಯ ಗೀಚು ಬರಹ ಬರೆದಿದ್ದರು.
“ಸಂಘಗಳು ಹಾಗೂ ಮನುವಾದಿಗಳನ್ನು ನಿಗ್ರಹಿಸಲು ಲಷ್ಕರ್-ಎ-ತೊಯ್ದಾ ಮತ್ತು ತಾಲಿಬಾನಿಗಳನ್ನು ಆಹ್ವಾನಿಸುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್” ಎಂದು ಗೋಡೆಯಲ್ಲಿ ಬರೆಯಲಾಗಿತ್ತು.
Web Stories