ಮಂಗಳೂರು: ಬಾಂಬ್ ಸ್ಫೋಟ ಮಾಡಿದ ಉಗ್ರ ಶಾರೀಕ್ (Shariq) ದಾರಿ ತಪ್ಪಿದ್ದು ಹೇಗೆ, ಶಿಕ್ಷಣ ಕಲಿತು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಬೇಕಿದ್ದ ಶಾರೀಕ್ ಶಿಕ್ಷಣ ಕಲಿತ ಊರನ್ನೇ ಸ್ಫೋಟಿಸಲು ಸಂಚು ರೂಪಿಸಿದ್ಯಾಕೆ. ತಂದೆ-ತಾಯಿ ಇಲ್ಲದ ಅನಾಥ ಹುಡುಗ ಕುಟುಂಬದ ಮಾತು ಕೇಳಿದ್ರೆ ಇಂದು ಉಗ್ರನಾಗುತ್ತಿರಲಿಲ್ಲ.
Advertisement
ಹೌದು. ಮಂಗಳೂರಿನ ಕುಕ್ಕರ್ ಬಾಂಬರ್ ಶಾರೀಕ್ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಮೊದಲ ಬಾರಿಗೆ ಮಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ರೂಪಿಸಿದ್ದ ಸಂಚು ಸಹ ವಿಫಲವಾಗಿದೆ. ಅಷ್ಟಕ್ಕೂ ಈತ ಈ ಮಟ್ಟಿಗೆ ಉಗ್ರತ್ವವನ್ನು ಮೈಗೂಡಿಸಿಕೊಳ್ಳಲು ಕಾರಣ ಏನು ಅಂತ ನೋಡಿದ್ರೆ. ಈತ ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಳಿಕ ಮಲತಾಯಿಯ ಆಶ್ರಯದಲ್ಲಿ ಬೆಳೆದಿದ್ದ. ಇದನ್ನೂ ಓದಿ: ರಾಷ್ಟ್ರಧ್ವಜ ಕಂಡರೆ ಬೆಂಕಿ ಹಚ್ಚುತ್ತಿದ್ದ ಶಾರೀಕ್ ಗ್ಯಾಂಗ್
Advertisement
Advertisement
ಕಳೆದ ಕೆಲ ವರ್ಷದ ಹಿಂದೆ ಆತನ ತಂದೆ ಅಬ್ದುಲ್ ಮಜೀದ್ ಕೂಡಾ ಸಾವನ್ನಪ್ಪಿದ್ದು ಬಳಿಕ ಮನೆಯಿಂದಲೂ ದೂರವಾಗಿದ್ದ. ಮಂಗಳೂರಿನ ದೇರಳಕಟ್ಟೆಯಲ್ಲಿ ಶಿಕ್ಷಣ ಪಡೆಯಲು ಬಂದಿದ್ದ ಶಾರೀಕ್ ನಗರದ ಬಲ್ಮಠದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಈ ನಡುವೆ ಶಿಕ್ಷಣ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಉಗ್ರ ಸಂಪರ್ಕಕ್ಕೆ ಹಾತೊರೆಯುತ್ತಿದ್ದ. ಇದೇ ಸಂದರ್ಭದಲ್ಲಿ ಉಗ್ರರ ಪರ ಗೋಡೆ ಬರಹ ಬರೆದು ಉಗ್ರರಿಂದ ಆಕರ್ಷಿತನಾಗಿದ್ದ. ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಗುಣಮುಖನಾಗಲು 25 ದಿನ ಬೇಕು
Advertisement
ಕಳೆದ 2020ರ ಡಿಸೆಂಬರ್ 5 ರಂದು ಮಂಗಳೂರಿನ ಎರಡು ಕಡೆ ಗೋಡೆ ಬರಹ ಬರೆದಿದ್ದು ಅದರಲ್ಲಿ ತಾಲಿಬಾನ್ (Taliban), ಲಷ್ಕರ್ ತೊಯ್ಬಾ ಜಿಂದಾಬಾದ್, ಸಂಘಿಗಳ ಅಟ್ಟಹಾಸವನ್ನು ಮಟ್ಟಹಾಕಲು ಲಷ್ಕರ್ ತೋಯ್ಬಾವನ್ನು ಮಂಗಳೂರಿಗೆ ಕರೆಸಬೇಕಾಗುತ್ತದೆ ಎಂದು ಬರೆದಿದ್ದ. ಈ ವೇಳೆ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರ ಬಂದಿದ್ದ. ಬಳಿಕ ಮನೆಯವರೂ ಈತನಿಗೆ ಬುದ್ಧಿಮಾತು ಹೇಳಿದ್ದು ಇಂತಹ ಕೆಲಸ ಮಾಡಬೇಡ ಎಂದು ಎಚ್ಚರಿಕೆ ನಿಡಿದ್ರು.
ಇದರಿಂದ ರೊಚ್ಚಿಗೆದ್ದು ಮನೆ ಬಿಟ್ಟು ಬಂದಿದ್ದ ಶಾರೀಕ್, ಬಳಿಕ ಭೂಗತನಾಗಿದ್ದ. ಉಗ್ರರ ನಶೆಯಲ್ಲೇ ಇದ್ದ ಶಾರೀಕ್ ಹೇಗಾದ್ರೂ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಮಾಡಬೇಕೆಂದು ನಿರ್ಧರಿಸಿದ್ದ. ಅದಕ್ಕಾಗಿ ತಾನು ಶಿಕ್ಷಣ (Education) ಕಲಿತ ಮಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದ. ಈ ಮೂಲಕ ಉಗ್ರರನ್ನು ಮಂಗಳೂರಿಗೆ ಕರೆಸುತ್ತೇವೆ ಎಂದು ಗೋಡೆ ಬರಹದಲ್ಲಿ ಬರೆದಂತೆ ತಾನೇ ಉಗ್ರನಾಗಿ ಬಂದು ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ. ಆದರೆ ಆತ ಅಂದುಕೊಂಡಂತೆ ಯಾವುದೂ ನಡೆಯದೆ ಸಣ್ಣ ಪ್ರಮಾಣದಲ್ಲಿ ಸ್ಫೋಟ ನಡೆದು ಹೋಯ್ತು.
ಒಟ್ಟಿನಲ್ಲಿ ಶಿಕ್ಷಣ ಕಲಿತು ಮನೆಗೆ ಆಧಾರ ಸ್ತಂಭವಾಗಬೇಕಿದ್ದ ಶಾರೀಕ್ ಇದೀಗ ಉಗ್ರನಾಗಿ ಬಾಂಬ್ ಸ್ಫೋಟಿಸಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ತಾನು ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾನೆ.