ಮಂಗಳೂರು : ಮಂಗಳೂರಿನ (Mangaluru) ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಶಂಕಿತ ಉಗ್ರ ಶಾರಿಕ್‌ನನ್ನು NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Bomb Blast) ಬಳಿಕ ಶಾರಿಕ್ ಗಂಭೀರವಾಗಿ ಗಾಯಗೊಂಡಿದ್ದ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕಮಕನಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಉಗ್ರ ಶಾರಿಕ್ (Shariq) ಚಿಕಿತ್ಸೆ ಪಡೆಯುತ್ತಿದ್ದ. ಅಷ್ಟೇ ಅಲ್ಲದೇ ಆತನಿಗೆ NIA ಅಧಿಕಾರಿಗಳು ಭದ್ರತೆಯನ್ನು ನೀಡಿದ್ದರು. ಮೊನ್ನೆಯಷ್ಟೇ ಶಾರಿಕ್ ನಡೆಯುವ ಸ್ಥಿತಿಗೆ ತಲುಪಿದ್ದ. ಈ ವೇಳೆ ಆಸ್ಪತ್ರೆಯಲ್ಲೇ NIA ಅಧಿಕಾರಿಗಳು ಶಾರಿಕ್‌ನನ್ನು ವಿಚಾರಣೆ ನಡೆಸಿದ್ದರು.
ಆದರೆ ಇಂದು ಬೆಳ್ಳಂ ಬೆಳಿಗ್ಗೆ ಶಾರಿಕ್‌ನನ್ನು NIA ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ನೂ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ NIA ಅಧಿಕಾರಿಗಳು ವಿಚಾರಣೆ ಮುಂದುವರಿಸಲಿದ್ದಾರೆ.
ಘಟನೆಯೇನು?: ಇತ್ತೀಚೆಗೆ ಮಂಗಳೂರಿನಲ್ಲಿ ರಿಕ್ಷಾದಲ್ಲಿ ಸ್ಫೋಟಗೊಂಡು ಕುಕ್ಕರ್ ಮುಚ್ಚಳ ಶಾರಿಕ್ ಕುತ್ತಿಗೆಗೆ ಬಡಿದಿತ್ತು. ಇದರಿಂದಾಗಿ ಶಾರಿಕ್‌ನ ಕೈ, ದೇಹಕ್ಕೆ ಬೆಂಕಿ ಬಿದ್ದರಿಂದ ಯಾವುದೇ ಕ್ಷಣದಲ್ಲಿ ಸೋಂಕು ತಗುಲಿ ಆರೋಗ್ಯ ಏರುಪೇರಾಗುವ ಸಾಧ್ಯತೆಯಿತ್ತು. ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL) ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಇದನ್ನೂ ಓದಿ: ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ ʼನಮ್ಮ ಬ್ರದರ್ಸ್ʼ ಎನ್ನಬೇಕಿತ್ತೇ – ಬಿಜೆಪಿ
ಶಾರಿಕ್ ತಂದಿದ್ದು ಅಂತಿಂಥ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್‍ಗೆ ಇಡೀ ಬಸ್ಸನ್ನೇ ಸ್ಫೋಟಿಸುವ ಪವರ್ ಇತ್ತಂತೆ. 3 ಲೀಟರ್ ಕುಕ್ಕರ್ ತುಂಬಾ ಸ್ಫೋಟಕದ ಜೆಲ್ ತಂದಿದ್ದ. ಡಿಟೋನೆಟರ್ ಕೂಡ ಇದ್ದು ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತಂತೆ, ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೆ ಶಾರ್ಟ್ ಸರ್ಕ್ಯೂಟ್ ಆಗಿ ಜೆಲ್‍ಗೆ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ. ಒಂದ್ವೇಳೆ ಡಿಟೊನೇಟರ್ ಮತ್ತು ಜೆಲ್ ಎರಡೂ ಒಂದೇ ಬಾರಿಗೆ ಸ್ಫೋಟಿಸಿದರೆ ಭಯಾನಕ ಘಟನೆಯೇ ನಡೆದು ಹೋಗ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಶಾರೀಕ್ ಆರೋಗ್ಯದಲ್ಲಿ ಶೇ.80ರಷ್ಟು ಚೇತರಿಕೆ – ನಡೆದಾಡುವ ಸ್ಥಿತಿಗೆ ಬಂದ ಉಗ್ರ