ಮಂಗಳೂರು: ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಸಂರಕ್ಷಿಸುವ ಮೂಲಕ ನಾವೆಲ್ಲರೂ ನೈಜ ಭಾರತೀಯರಾಗೋಣ ಎಂದು ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಹೇಳಿದರು.
ಸಂವಿಧಾನ ಸಂರಕ್ಷಣಾ ವೇದಿಕೆ ಗುರುಪುರ ಕೈಕಂಬ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈಗ ಇರುವ ಕೇಂದ್ರ ಸರ್ಕಾರ ನಮ್ಮ ದೇಶದ ಸಂವಿಧಾನವನ್ನೇ ಬದಲಿಸಲು ಹೊರಟಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತಿದ್ದಾರೆ. ಹೀಗಾಗಿ ನಾವೆಲ್ಲ ಇದನ್ನು ವಿರೋಧಿಸೋದು ಅನಿವಾರ್ಯವಾಗಿದೆ ಎಂದರು.
ಇಸ್ಮಾಯಿಲ್ ಬಜಪೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಖ್ಯಾತ ಪತ್ರಕರ್ತ ಶಶಿಧರ್ ಭಟ್ ಉದ್ಘಾಟನೆಗೈದರು. ಆಲ್ಫೋನ್ಸ್ ಫ್ರಾಂಕೋ ಫ್ರಾಂಕ್, ಮೌಲಾನಾ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್, ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮೌಲಾನಾ ತಾರೀಕ್ ಅನ್ವರ್ ಸಲಫೀ, ಎ. ಕೆ ಅಶ್ರಫ್ ಜೋಕಟ್ಟೆ, ರಾಚಿಂತನ್, ರಮಾನಾಥ ರೈ, ವಸಂತ ಆಚಾರಿ ಮಾತನಾಡಿದರು.
ಸುಮಾರು 10 ಸಾವಿರಕ್ಕಿಂತಲೂ ಮಿಕ್ಕಿ ಸೇರಿದ ಬೃಹತ್ ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಚಿಂತಕರೂ ಹಲವಾರು ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮ ಪ್ರಾರಂಭದಲ್ಲಿ ಕೆ.ಹೆಚ್ ಯು ಶಾಫಿ ಮದನಿ ಕರಾಯ ಸ್ವಾಗತಿಸಿ ಆರಿಫ್ ಕಮ್ಮಾಜೆ ಧನ್ಯವಾದಗೈದರು.