Connect with us

Dakshina Kannada

ಇನ್ಸ್ ಪೆಕ್ಟರ್ ಮುಂದೆ ಮೇಜು ಕುಟ್ಟಿ ಸಂಸದ ನಳಿನ್ ಕುಮಾರ್ ಅವಾಜ್

Published

on

ಮಂಗಳೂರು: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಪೊಲೀಸ್ ಇನ್ಸ್ ಪೆಕ್ಟರ್ ಜೊತೆಗೆ ದರ್ಪದಲ್ಲಿ ಮಾತನಾಡಿ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.

ಬಿಜೆಪಿ ಯುವ ಮೋರ್ಚಾದ ಬಿಜೆಪಿ ರ‍್ಯಾಲಿಯ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಕದ್ರಿಯ ಗೋರಕ್ಷನಾಥ ಸಭಾಂಗಣದಲ್ಲಿ ಇರಿಸಿದ್ದರು.

ಕಾರ್ಯಕರ್ತರನ್ನು ಬಿಡುಗಡೆ ಮಾಡಲು ತಡಮಾಡಿದ್ದಕ್ಕೆ ಆಕ್ರೋಶಗೊಂಡ ನಳಿನ್ ಕುಮಾರ್ ಕಟೀಲು ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಮೇಲೆ ಆಕ್ರೋಶವಾಗಿ ಮಾತನಾಡಿ ದರ್ಪವನ್ನು ತೋರಿಸಿದ್ದಾರೆ.

ಈ ವೇಳೆ ಮಾರುತಿ ನಾಯಕ್ ಮೊಬೈಲ್ ಕರೆ ಮಾಡಲು ಮುಂದಾದಾಗ ಕಟೀಲು, ನಿಮ್ ಚಾರ್ಜ್, ನಮ್ಮ ಚಾರ್ಜ್ ಅಲ್ಲ. ಸಹಿ ಮಾಡಿ. ಜೋರು ಮಾಡಿದ್ರೆ ಈಗಲೇ ಬಂದ್ ಕಾಲ್ ಕೊಡ್ತೀನಿ, ನೀವೇ ಅನುಭವಿಸಬೇಕು. ಏನು ತಿಳ್ಕೊಂಡಿದ್ದಾರೆ ಕಮಿಷನರ್. ನೀವು ಏನು ತಿಳ್ಕೊಂಡಿದ್ದೀರಾ..? ಆಟ ಆಡ್ತೀರಾ ನಮ್ಮತ್ರ? ನಮ್ಮ ಸಂಘಟನೆಯವ್ರು ತೆಗೆದು ಬಿಸಾಕ್ತಾರೆ. ಕೊಡ್ರಿ ಈಚೆ. ಇನ್ನು ಅರ್ಧ ಗಂಟೆ ಲಾಕ್ ಮಾಡಿದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಅನುಭವಿಸಬೇಕು. ಕೊಡ್ರಿ ಈಚೆ. ಇಲ್ಲಾಂದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಜವಾಬ್ದಾರಿ ನಿನ್ನ ಹೆಸರಲ್ಲೇ ಬಂದ್ ಕಾಲ್ ಕೊಡ್ತೇನೆ. ಏನ್ ತಿಳ್ಕೊಂಡಿದ್ದಿ..? ಏನ್ ನಮ್ದು..? ಅರ್ಧ ಗಂಟೆ ಆಯ್ತು ಫೋನ್ ಮಾಡಿ ಎಂದು ಹೇಳಿ ದರ್ಪದಲ್ಲಿ ಮಾತನಾಡಿದ್ದಾರೆ.

https://youtu.be/z0V_F1q5DDM

Click to comment

Leave a Reply

Your email address will not be published. Required fields are marked *

www.publictv.in