ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಅವರದ್ದು ಆತ್ಮಹತ್ಯೆ ಅಲ್ಲ ಕೊಲೆಯೆಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಸಿದ್ಧಾಥ್ ಅವರು ತಮ್ಮ ಕಾರಿನಲ್ಲಿ ಜಪ್ಪಿನಮೊಗರಿನಲ್ಲಿರುವ ನೇತ್ರಾವತಿ ಸೇತುವೆ ಬಳಿ ಬರುತ್ತಿದ್ದಂತೆಯೇ ಹಲವು ಬೆಳವಣಿಗೆಗಳು ನಡೆದಿದೆ. ಈ ಎಲ್ಲಾ ಘಟನೆಗಳು ಅನುಮಾನ ಹುಟ್ಟುವಂತೆ ಮಾಡಿವೆ. ಈ ಅನುಮಾನಗಳು ಇದೀಗ ಸಿದ್ಧಾರ್ಥ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡುವಂತೆ ಮಾಡಿದೆ.
Advertisement
Advertisement
ಸಿದ್ಧಾರ್ಥ್ ಅವರ ಕಾರು ಸಂಜೆ 5.28ರ ಸುಮಾರಿಗೆ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲುವಿನಲ್ಲಿ ಪಾಸಾಗಿದೆ. ಆ ಬಳಿಕ ನೇತ್ರಾವತಿ ಸೇತುವೆ ಬಳಿ ಬಂದಾಗ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸಿದ್ಧಾರ್ಥ್ ಯಾಕೆ ಹೇಳಿದರು. ಅಲ್ಲದೆ ಸೇತುವೆ ಪಕ್ಕ ಕಾರಿನಿಂದ ಇಳಿದ ಸಿದ್ಧಾರ್ಥ್, 7 ಗಂಟೆಗೆ ಬರುತ್ತೇನೆ. ಕೊಟ್ಟಾಯಂ ಏರ್ ಪೋರ್ಟಿಗೆ ಬಿಡಬೇಕು ಎಂದು ಚಾಲಕನಿಗೆ ಹೇಳಿದ್ದರಂತೆ. ಹೀಗಾಗಿ ನೇತ್ರಾವತಿ ಸೇತುವೆಯಿಂದ 1 ಕಿ.ಮೀ ದೂರದಲ್ಲಿರುವ ಜಪ್ಪಿನ ಮೊಗರಿನಲ್ಲಿ ಸಿದ್ಧಾರ್ಥ್ ಯಾಕೆ ಇಳಿದರು, ಒಂದು ವೇಳೆ ಅಲ್ಲಿ ಅವರನ್ನು ಯಾರಾದರೂ ಭೇಟಿಯಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ:ಕಾಣೆಯಾಗುವ ಕೊನೆ ಕ್ಷಣದ ಮಾಹಿತಿ ಬಿಚ್ಚಿಟ್ಟ ಸಿದ್ಧಾರ್ಥ್ ಡ್ರೈವರ್
Advertisement
Advertisement
ಸಾವಿಗೂ ಮುನ್ನ ಸಿದ್ಧಾರ್ಥ್ ಅವರು ಸಾಲ ಪಡೆದಿದ್ದ ವ್ಯಕ್ತಿಗಳನ್ನ ಭೇಟಿಯಾಗಿದ್ದಾರೆಯೇ, ನೇತ್ರಾವತಿ ಸೇತುವೆ ಬಳಿ ಸಿದ್ಧಾರ್ಥ್ ಜೊತೆ ಕಾರಿನಲ್ಲಿ ರಹಸ್ಯ ಮಾತುಕತೆ ನಡೆದಿತ್ತೇ, ಹಣ ಪಡೆದಿದ್ದ ರಾಜಕಾರಣಿ ಮತ್ತು ಮುಂಬೈ ಫೈನಾನ್ಸ್ ದಲ್ಲಾಳಿಗಳಿಂದ ರಹಸ್ಯ ಭೇಟಿಯಾಗಿದೆಯೇ, ತನ್ನ ಕಾರಿನಿಂದ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಇಳಿದಿದ್ದ ಸಿದ್ದಾರ್ಥ್ ಯಾರನ್ನಾದರೂ ಭೆಟಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಂಜೆ ಏಳು ಗಂಟೆಗೆ ನೇತ್ರಾವತಿ ಸೇತುವೆ ಪಕ್ಕ ತೆರಳಿದ್ದೆ ಎಂದು ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಚಾಲಕ ಹೇಳಿಕೆಯಿಂದಲೇ ಅನುಮಾನ ಹುಟ್ಟಿಕೊಂಡಿದ್ದು, ಹಾಗಾದರೆ ಸಿದ್ಧಾರ್ಥ್ ಅವರು ಸುದೀರ್ಘ ಒಂದೂವರೆ ಗಂಟೆ ಆಗಂತುಕರ ಜೊತೆ ಮಾತುಕತೆ ನಡೆಸಿದ್ದಾರೆಯೇ ಅನ್ನೋ ಸಂಸಯ ಮೂಡಿದೆ. ಈ ವೇಳೆ, ಸಿದ್ಧಾರ್ಥ್ ತಮ್ಮ ವಿರೋಧಿಗಳ ಕಾರಿನಲ್ಲಿ ತೆರಳಿರುವ ಬಗ್ಗೆ ಶಂಕೆಯೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿದ್ಧಾರ್ಥ್ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದವರು ಯಾರು ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆಯಾಗಿದ್ದು ಹೇಗೆ?
ಮಂಗಳೂರು ತಲುಪುತ್ತಿದ್ದಂತೆಯೇ ಸಿದ್ಧಾರ್ಥ್ ಅವರು ತಮ್ಮ ಚಾಲಕನಲ್ಲಿ ಉಳ್ಳಾಲದ ಸೈಟ್ ನೋಡಲು ಹೋಗಬೇಕು ಎಂದು ಹೇಳಿದ್ದರು. ಕಾಫಿ ಸಾಮ್ರಾಟ, ಉಳ್ಳಾಲ ಮತ್ತು ನೇತ್ರಾವತಿ ಪಕ್ಕದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದರು. ಎರಡು ವರ್ಷಗಳಿಂದ ರೆಸಾರ್ಟ್ ಕನಸು ಈಡೇರದೇ ಉಳಿದಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಕೈಹಾಕಲು ಮುಂದಾಗಿದ್ದ ವಿ.ಜಿ ಸಿದ್ಧಾರ್ಥ್, ಕೋಸ್ಟಲ್ ಟೂರಿಸಂ ಅವರ ಪಾಲಿಗೆ ಮುಳ್ಳಾಗಿ ಹೋಯಿತೇ ಅನ್ನೋ ವ್ಯಾಪಕ ಚರ್ಚೆಯಾಗುತ್ತಿದೆ.
https://www.youtube.com/watch?v=wZvAI8ub-RY