– ಮಾನವೀಯತೆ ಮೆರೆದ ಪ್ರತಿಭಟನಾಕಾರರ ವಿಡಿಯೋ ವೈರಲ್
ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಮಹಿಳೆಯರು ಸಿಲುಕಿ ಪರದಾಡುವಂತಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಆಟೋ ಎತ್ತಿ ಡಿವೈಡರ್ ದಾಟಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರಿನ ಅಡ್ಯಾರ್ ಮೈದಾನದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಹೀಗಾಗಿ ಅಡ್ಯಾರ್ ಸುತ್ತಮುತ್ತ ಸಂಚಾರ ಸ್ಥಗಿತಗೊಂಡಿತ್ತು. ಈ ನಡುವೆ ಅನಾರೋಗ್ಯ ಪೀಡಿತ ಮಹಿಳೆಯರಿಬ್ಬರು ಆಟೋ ಒಂದರಲ್ಲಿ ಬಂದಿದ್ದು, ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇದನ್ನೂ ಓದಿ: ‘ಅಮಿತ್ ಶಾ ಭಾರತ ಕಂಡರಿಯದ ಕ್ರೂರಿ’- ಶಾಂತಯುತವಾಗಿ ಮುಗಿದ ಮಂಗ್ಳೂರು ಪ್ರತಿಭಟನೆ
Advertisement
Advertisement
ಕೆಲ ಪ್ರತಿಭಟನಾಕಾರರು ಆಟೋ ಸಿಲುಕಿದ್ದನ್ನು ಹಾಗೂ ಮಹಿಳೆಯರ ಸಮಸ್ಯೆ ಅರಿತು ಸಹಾಯಕ್ಕೆ ನಿಂತರು. ಬಳಿಕ ಆಟೋವನ್ನು ಎತ್ತಿ ಡಿವೈಡರ್ ದಾಟಿಸಿ ಇನ್ನೊಂದು ರಸ್ತೆಗೆ ಸಾಗಿಸಿದರು. ಇದರಿಂದಾಗಿ ಮಹಿಳೆಯರು ಆಟೋವನ್ನು ಏರಿ ಆಸ್ಪತ್ರೆ ಕಡೆಗೆ ಸಂಚರಿಸಿದರು. ಪ್ರತಿಭಟನಾಕಾರರ ಈ ಮಾನವೀಯತೆ ಕೆಲಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.