ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್‌ಗೆ (Mangaluru Bomb Blast Case) ಸಂಬಂಧಿಸಿದಂತೆ ತಮಿಳುನಾಡು (Tamil Nadu), ಕೇರಳ ಎಲ್ಲಾ ಕಡೆಗಳಲ್ಲೂ ತನಿಖೆ ಚುರುಕುಗೊಳಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ (Praveen Sood) ಹೇಳಿದ್ದಾರೆ.
Advertisement
ಮಂಗಳೂರು ಪೊಲೀಸ್ ಆಯುಕ್ತರ (Mangaluru Police Commissioner) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರೀಕ್ (Shariq) ಕೃತ್ಯಕ್ಕೆ ಹಣದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈಗಲೇ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಲು ಸಾಧ್ಯವಿಲ್ಲ. ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಅವನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರುತ್ತೆ. ಈಗಲೇ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಿದ್ರೆ ಮುಂದಿನ ವಿಚಾರಣೆಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾವು-ಬದುಕಿನ ನಡುವೆ ಶಂಕಿತ ಉಗ್ರ ಶಾರೀಕ್ ನರಳಾಟ- ಪೊಲೀಸರಲ್ಲಿ ಆತಂಕ
Advertisement
Advertisement
ಎನ್‌ಐಎ (NIA) ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆ ಇದೆ. ಸದ್ಯದಲ್ಲೇ ಸದ್ಯದಲ್ಲೇ ಅಧಿಕೃತವಾಗಿ ಈ ಪ್ರಕರಣ ಎನ್‌ಐಎಗೆ ಹಸ್ತಾಂತರ ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ಆಗ್ತಿದೆ. ನಮ್ಮ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಮುಂದುವರಿಸುತ್ತಾರೆ. ಪ್ರತಿಯೊಬ್ಬರ ಸಹಕಾರಕ್ಕಾಗಿ ನಾವು ಹಲವು ಜನರನ್ನ ವಿಚಾರಣೆ ಮಾಡುತ್ತೇವೆ. ಅವರನ್ನು ನಾವು ಅರೆಸ್ಟ್ ಮಾಡ್ತಿಲ್ಲ. ವಿಚಾರಣೆಗೆ ಮಾತ್ರ ಕರೆದು ತರ್ತೀವಿ ಅಷ್ಟೇ ಹೊರತು ಅವರು ಅಪರಾಧಿಗಳಾಗಿರುವುದಿಲ್ಲ. ಅವರನ್ನು ಅಪರಾಧಿಗಳಂತೆ ಬಿಂಬಿಸುವುದನ್ನು ಬಿಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಹಿಂದುತ್ವ ಹಣೆಪಟ್ಟಿಗೆ ಸಂಚು – ಮುಂಬೈ ಕಸಬ್‌ನಂತೆ ದಾಳಿಗೆ ಬಾಂಬರ್ ಶಾರೀಕ್ ಸ್ಕೆಚ್
Advertisement
ಈಗಾಗಲೇ ಬೆಂಗಳೂರು ಸೇರಿ 8 ಕಡೆ ದಾಳಿ ನಡೆಸಿ, 4 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದೇವೆ. ಆದರೆ ಆರೋಪಿಗಳು ಅಂತ ಯಾರನ್ನೂ ಕರೆತಂದಿಲ್ಲ. ಒಬ್ಬರನ್ನು ಹಿಡಿಯುವ ಪ್ರಶ್ನೆಯಲ್ಲ, ಕೃತ್ಯದ ಹಿಂದಿರುವವರೂ ನಮಗೆ ಬೇಕು. ಅದಕ್ಕಾಗಿ ನಾವು ಎಲ್ಲಾ ರೀತಿಯಿಂದಲೂ ತನಿಖೆ ಮಾಡ್ತಾ ಇದೀವಿ ಎಂದು ಮಾಹಿತಿ ನೀಡಿದ್ದಾರೆ.