Bengaluru CityDakshina KannadaDistrictsKarnatakaLatestLeading NewsMain Post

ಮಂಗಳೂರು ಬಾಂಬ್ ಬ್ಲಾಸ್ಟ್ ಕೇಸ್ – ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಬೆಂಗಳೂರು: ಬಾಂಬ್ ಬ್ಲಾಸ್ಟ್ (Mangaluru Bomb Blast) ಪ್ರಕರಣದ ಸಂಬಂಧ ನಾಳೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ (Praveen Sood) ಹಾಗೂ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಭೇಟಿ ಸಂದರ್ಭದಲ್ಲಿ ಸಚಿವರು, ಬಾಂಬ್ ಸ್ಫೋಟ ಘಟನೆಯಿಂದ ಗಾಯಗೊಂಡ ಆಟೋ ರಿಕ್ಷಾ ಚಾಲಕನನ್ನೂ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆ – ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಲು ಸರ್ಕಾರ ಚಿಂತನೆ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಗಳೂರು ಆಟೋ ರಿಕ್ಷಾ ಬಾಂಬ್ ಸ್ಫೋಟ ಘಟನೆಯನ್ನು (Mangaluru Bomb Blast Case) ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆಗಳನ್ನು ಆಮೂಲಗ್ರಹವಾಗಿ ತನಿಖೆ ಮಾಡಿ, ದ್ರೋಹಿಗಳನ್ನು ಮಟ್ಟ ಹಾಕಲು ಪೋಲಿಸರು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ (NIA) ಇದಕ್ಕೆ ಸಹಕರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

ಈವರೆಗಿನ ಮಾಹಿತಿ ಆಧರಿಸಿ, ರಾಜ್ಯ ಪೊಲೀಸರು ಉಗ್ರಗಾಮಿ ಚಟುವಟಿಕೆಗಳಿಗೆ ಸಹಕರಿಸಿದವರ ವಿರುದ್ಧ ತನಿಖೆ ತೀವ್ರಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ನಿಂದ ಇನ್ನೂ ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ ಎಂದು ಹೇಳಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button