ಮೈಸೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಮಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೂ ಮೊದಲು ಉಗ್ರ ಶಾರಿಕ್ ತಂಗಿದ್ದ ಬಾಡಿಗೆ ಮನೆಯಲ್ಲಿ ಪ್ರತಿನಿತ್ಯ ರಾತ್ರಿ ಕೊಯ್ಯುವ, ಚುಚ್ಚುವ ಶಬ್ದಗಳು ಕೇಳಿ ಬರುತ್ತಿತ್ತು ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ಶಾರೀಕ್ ಬಗ್ಗೆ ಮಾತನಾಡಿ, ಮೈಸೂರಿನ ಲೋಕನಾಯಕ ನಗರ, ಮೇಟಗಳ್ಳಿಯಲ್ಲಿರುವ ಸಿಂಗಲ್ ರೂಮ್‌ನಲ್ಲಿ ಉಗ್ರ ಶಾರೀಕ್ ವಾಸವಿದ್ದ. ಆ ಮನೆಗೆ ಶಾರೀಕ್ ಮನೆಯ ಮಾಲೀಕನನ್ನು ಒಳಗೆ ಸೇರಿಸುತ್ತಿರಲಿಲ್ಲ. ರೂಂ ಬಳಿ ಯಾರದರೂ ಬರುತ್ತಿದ್ದಂತೆ ತಕ್ಷಣವೇ ಆತನೇ ಹೊರಬರುತ್ತಿದ್ದ. ಅಷ್ಟೇ ಅಲ್ಲದೇ ಕನ್ನಡಕ ಧರಿಸಿ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ ಎಂದು ಹೇಳಿದರು.
ಶಾರೀಕ್‌ನನ್ನು ಯಾರಾದರೂ ಏನಾದ್ರು ಪ್ರಶ್ನೆ ಮಾಡಿದರೆ ಸಡನ್ನಾಗಿ ಡೋರ್ ಲಾಕ್ ಮಾಡಿಕೊಳ್ಳುತ್ತಿದ್ದ ಎಂದು ಹೇಳಿದರು. ಈ ರೀತಿ ನೆರೆ ಹೊರೆಯವರ ಉದಾಸೀನದಿಂದ ಉಗ್ರ ಶಾರೀಕ್ ಚಿಗುರಿಕೊಂಡಿದ್ದು, ದೇಶದ್ರೋಹಿ ಕೃತ್ಯವನ್ನು ಮುಂದುವರಿಸಿದ್ದ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್ – ಮೊಬೈಲ್‌ನಲ್ಲಿ 6 ಜಾಗ ಸರ್ಚ್ ಮಾಡಿದ್ದ ಬಾಂಬರ್
ಉಗ್ರ ವಾಸವಿದ್ದ ಮನೆಯ ಪಕ್ಕದ ಮನೆಯಲ್ಲಿ ಮನೆ ಖಾಲಿ ಇದೆ ಎಂದು ಬೋರ್ಡ್‌ಗಳನ್ನು ನೇತು ಹಾಕಿಕೊಳ್ಳಲಾಗಿದೆ. ಇಂತಹ ಮನೆಗಳನ್ನೇ ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ