ಮಂಗಳೂರು: ಕುಕ್ಕರ್ ಸ್ಫೋಟದ(Mangaluru Blast Case) ರೂವಾರಿ, ಬಾಂಬರ್ ಶಾರೀಕ್(Shariq) ಗುಣಮುಖನಾಗಲು 25 ದಿನ ಬೇಕು ಎಂಬ ವಿಚಾರ ಸಿಕ್ಕಿದೆ.
ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ Father Muller Hospital) ಶಾರೀಕ್ ದಾಖಲಾಗಿದ್ದು, 8 ಮಂದಿ ತಜ್ಞ ವೈದ್ಯರು ಆರೋಗ್ಯವನ್ನು ಗಮನಿಸುತ್ತಿದ್ದಾರೆ. ಶೇ.45 ರಷ್ಟು ದೇಹದ ಭಾಗ ಸುಟ್ಟು ಹೋಗಿರುವುದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಹಿಂದುತ್ವ ಹಣೆಪಟ್ಟಿಗೆ ಸಂಚು – ಮುಂಬೈ ಕಸಬ್‌ನಂತೆ ದಾಳಿಗೆ ಬಾಂಬರ್ ಶಾರೀಕ್ ಸ್ಕೆಚ್
Advertisement
Advertisement
ರಿಕ್ಷಾದಲ್ಲಿ ಸ್ಫೋಟಗೊಂಡು ಸಿಡಿದ ಕುಕ್ಕರ್ ಮುಚ್ಚಳ ಶಾರೀಕ್ ಕುತ್ತಿಗೆಗೆ ಬಡಿದಿದೆ. ಕೈ, ದೇಹಕ್ಕೆ ಬೆಂಕಿ ಬಿದ್ದರಿಂದ ಯಾವುದೇ ಕ್ಷಣದಲ್ಲಿ ಸೋಂಕು ತಗುಲಿ ಆರೋಗ್ಯ ಏರುಪೇರಾಗುವ ಸಾಧ್ಯತೆಯಿದೆ.
Advertisement
ಶಿವಮೊಗ್ಗದಲ್ಲಿ ಬಾಂಬ್ ಸ್ಫೋಟದ ಪರೀಕ್ಷೆ ನಡೆಸಿದ್ದ ಪ್ರಕರಣದಲ್ಲಿ ಶಾರೀಕ್ ಎ1 ಆರೋಪಿಯಾಗಿದ್ದಾನೆ. ಮಂಗಳೂರು ಸ್ಫೋಟಕ್ಕೂ ಮುನ್ನ ಆತ ತಮಿಳುನಾಡಿನ ಕೊಯಮತ್ತೂರಿಗೆ ಹೋಗಿದ್ದ. ಅಷ್ಟೇ ಅಲ್ಲದೇ ಕೇರಳಕ್ಕೂ ತೆರಳಿದ್ದ.
Advertisement
ಮೈಸೂರಿನ ಕೊಠಡಿಯಲ್ಲಿ ಸ್ಫೋಟಕ ಸಾಮಾಗ್ರಿಗಳು ಸಿಕ್ಕಿರುವುದರಿಂದ ಉಗ್ರರ ಗ್ಯಾಂಗ್ ಬಗ್ಗೆ ಮಾಹಿತಿ ಪಡೆಯಲು ಆತನ ವಿಚಾರಣೆ ಅಗತ್ಯವಾಗಿದೆ. ಈ ಕಾರಣಕ್ಕೆ ಆತನ ಆರೋಗ್ಯದ ಮೇಲೆ ಪೊಲೀಸರು ಸಂಪೂರ್ಣ ನಿಗಾ ಇರಿಸಿದ್ದಾರೆ.