ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ (Kotekaru Bank Robbery Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Advertisement
ಮುಂಬೈ ಗ್ಯಾಂಗ್‌ಗೆ (Mumbai Gang) ಸೇರಿದ್ದ ದರೋಡೆಕೋರರನ್ನು ತಮಿಳುನಾಡಿನ (TamilNadu) ಮಧುರೈ ಬಳಿ ಬಂಧಿಸಲಾಗಿದೆ. ಮುರುಗಂಡಿ ದೇವರ್, ಪ್ರಕಾಶ್ ಅಲಿಯಾಸ್ ಜೋಶ್ವಾ, ಮನಿವೆನನ್ ಬಂಧಿತ ದರೋಡೆಕೋರಾಗಿದ್ದು, ಬಂಧಿತರಿಂದ ಫಿಯಟ್ ಕಾರು ಹಾಗೂ 2 ಗೋಣಿ ಚೀಲವನ್ನ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ (Mangaluru Police Commissioner) ಅನೂಪ್‌ಕುಮಾರ್ ಹೇಳಿದ್ದಾರೆ.
Advertisement
ಮುರುಗಂಡಿ ಪ್ರಕರಣದ ಕಿಂಕ್‌ಪಿನ್:
ರಾಜ್ಯದ ಗುಪ್ತಚರ ಇಲಾಖೆಯ ಸಹಾಯದಿಂದ ಡಾಯಿತರ ಚಲನವಲನಗಳ ಮಾಹಿತಿ ಲಭ್ಯವಾಯಿತು. ಮೂವರು ಆರೋಪಿಗಳು ತಮಿಳುನಾಡು ಮೂಲದವರಾದರೂ ಮುಂಬೈ ಮೂಲದ ಗ್ಯಾಂಗ್‌ಗೆ ಸೇರಿಕೊಂಡಿದ್ದರು. ದರೋಡೆ ಬಳಿಕ ಕೇರಳದ ಮೂಲಕ ಎಸ್ಕೇಪ್ ಆಗಿದ್ದರು. ಆದ್ರೆ ನಾವು ಮುಂಬೈಗೆ ತನಿಖಾ ತಂಡ ಕಳುಹಿಸಿ ಮಾಹಿತಿ ಕಲೆಹಾಕಿದ್ದೆವು. 2 ತಂಡ ತಮಿಳುನಾಡಿನಲ್ಲಿ ಶೋಧ ನಡೆಸಿತ್ತು. ಸದ್ಯ ಪ್ರಕರಣದಲ್ಲಿ ಮುರುಗಂಡಿ ದೇವರ್ ತಿರುವೇಲಿ ಪಾತ್ರ ಪ್ರಮುಖವಾಗಿದೆ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Advertisement
Advertisement
ಏನಿದು ಕೇಸ್?
ಇದೇ ಜನವರಿ 17ರಂದು ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಹಾಡ ಹಗಲೇ ದರೋಡೆ ನಡೆಸಿತ್ತು. ಸಿಎಂ ಸಿದ್ದರಾಮಯ್ಯನವರು ಮಂಗಳೂರು ಪ್ರವಾಸದಲ್ಲಿ ಇರುವಾಗಲೇ ಈ ದರೋಡೆ ನಡೆದಿದ್ದು ಕಳವಳಕಾರಿಯಾಗಿತ್ತು.
ಮಟ ಮಟ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಯಾಂಕ್‌ಗೆ ಕೇವಲ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಮಾಮೂಲಿ ಜನರಂತೆ ನುಗ್ಗಿದ ಐವರು ಡಕಾಯಿತರು ಸುಮಾರು 11 ಕೋಟಿ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂಪಾಯಿ ನಗದು ದೋಚಿಕೊಂಡು ಪರಾರಿಯಾದ್ದರು. ದಷ್ಟಪುಷ್ಟವಾಗಿದ್ದ ಐವರು ಡಕಾಯಿತರು ಕಾರೊಂದರಲ್ಲಿ ಬಂದಿಳಿದು ಬ್ಯಾಂಕ್‌ಗೆ ನುಗ್ಗಿದ್ದರು. ಬ್ಯಾಂಕ್ ನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗೆ, ಚಿನ್ನಾಭರಣ ಪರಿವೀಕ್ಷಕ, ಸಿಸಿಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದಿದ್ದ ಟೆಕ್ನಿಶಿಯನ್ ಸೇರಿ ಐದು ಜನರಿಗೂ ಪಿಸ್ತೂಲ್, ಚಾಕು ಮಚ್ಚು ತೋರಿಸಿ ದರೋಡೆ ಮಾಡಿದ್ದರು. ಬ್ಯಾಂಕ್ ನೊಳಗೆ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದು ಡಕಾಯಿತರು ಸುಮಾರು 11 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದರು.
ಕಾರು ಹತ್ತಿ ಪರಾರಿಯಾಗಿದ್ದ ದರೋಡೆಕೋರರು ಕೇರಳ ಗಡಿ ತಲಪಾಡಿಯತ್ತ ತೆರಳಿದ್ದರು. ಕಾರಿಗೆ ಬೆಂಗಳೂರು ಪಾರ್ಕಿಂಗ್ ನಂಬರ್ KM4 AQ-9923 ಫೇಕ್ ನಂಬರ್ ಪ್ಲೇಟ್ ಹಾಕಿ, ತಲಪಾಡಿ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗದೇ 150 ರೂ. ಹಣ ನೀಡಿ ರಶೀದಿ ಪಡೆದು ಪರಾರಿಯಾಗಿದ್ದರು. ಈ ಟೋಲ್ ಗೇಟ್‌ನ ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪೊಲೀಸರ ಎರಡು ತಂಡ ಕಾಸರಗೋಡು, ಕೇರಳದತ್ತ ತೆರಳಿತ್ತು. ಅಲ್ಲದೇ ತಮಿಳುನಾಡು ಮುಂಬೈನಲ್ಲೂ ಪೊಲೀಸ್ ತಂಡ ತನಿಖೆ ಚುರುಕುಗೊಳಿಸಿದ್ದವು.