ಮಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ಜಾಲವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ತಂಡವು, ಇಬ್ಬರನ್ನು ಬಂಧಿಸಿ 2 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನವನ್ನು ವಶ ಪಡಿಸಿಕೊಂಡಿದೆ.
ಉಡುಪಿ ಮೂಲದ ಸ್ವರೂಪ್ ಮಿನರಲ್ ಪ್ರೈ.ಲಿ. ಕಂಪನಿಯ ನಿರ್ದೇಶಕ ಮನೋಹರ್ ಕುಮಾರ್ ಪೂಜಾರ್ ಹಾಗೂ ಮಂಗಳೂರಿನ ಲೋಹಿತ್ ಶ್ರೀಯಾನ್ ಬಂಧಿತ ಆರೋಪಿಗಳು. ಮಂಗಳೂರಿನ ಹಳೆ ವಿಮಾನ ನಿಲ್ದಾಣದಲ್ಲಿ ಏರ್ ಕಾರ್ಗೋದಲ್ಲಿ ಬೆಂಗಳೂರು ಮತ್ತು ಮಂಗಳೂರಿನ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ ಭಾರೀ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಉಡುಪಿ ಮೂಲದ ಸ್ವರೂಪ್ ಮಿನರಲ್ ಪ್ರೈ.ಲಿ. ಕಂಪನಿಗೆ ಮೈನಿಂಗ್ ಡ್ರೈವ್ ಚೈನ್ ಎನ್ನುವ ಹೆಸರಲ್ಲಿ ವಿದೇಶದಿಂದ ಸಾಮಗ್ರಿ ಬಂದಿತ್ತು. ಇದರಲ್ಲಿ ಅಲ್ಯುಮಿನಿಯಂ ಲೇಪನವುಳ್ಳ ವೀಲ್ ಮಾದರಿಯ ಸಾಮಗ್ರಿ ಪತ್ತೆಯಾಗಿದ್ದು, ಲೋಹದ ಆವರಣದ ಬಗ್ಗೆ ಸಂಶಯ ಬಂದು ಅಧಿಕಾರಿಗಳ ತಪಾಸಣೆ ನಡೆಸುವ ವೇಳೆ ಚಿನ್ನ ಪತ್ತೆಯಾಗಿದೆ.
Advertisement
ಕಂಪನಿಯ ಡೈರೆಕ್ಟರ್ ಮನೋಹರ್ ಪೂಜಾರಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಲೋಹಿತ್ ಶ್ರೀಯಾನ್‍ನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ಹಿಂದೆ ದೊಡ್ಡ ಗೋಲ್ಡ್ ಸ್ಮಗ್ಲಿಂಗ್ ಜಾಲ ಇರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವೀಲ್ ನಂತಿರುಚ ಈ ಸಾಮಗ್ರಿಯ ಮೇಲೆ ಅನುಮಾನ ಬಂದ ತನಿಖಾಧಿಕಾರಿಗಳು ಲೇತ್ ಮೆಷಿನ್ ಮೂಲಕ ವೀಲ್ ತುಂಡರಿಸಿ ತಪಾಸಣೆ ನಡೆಸಿದಾಗ ಇದರೊಳಗಿರೋದು ಚಿನ್ನ ಎಂದು ಪತ್ತೆಯಾಗಿದೆ.