ಮಂಗಳೂರು: ನಗರದ ಅಂತರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಶಂಕಿತ ಕೊರೊನಾ ಪ್ರಯಾಣಿಕನೊಬ್ಬ ಪತ್ತೆಯಾಗಿದ್ದಾನೆ. ಪ್ರಯಾಣಿಕ ಭಾನುವಾರ ತಡ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದಾನೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸ್ಕ್ರೀನಿಂಗ್ ವೇಳೆ ಟೆಂಪರೇಚರ್ ನಲ್ಲಿ ಬಯಲಾಗಿದೆ.
Advertisement
ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ತೆಗೆದು ಲ್ಯಾಬ್‍ಗೆ ರವಾನಿಸಿದ್ದು, ಕೊರೊನಾ ಇರೋ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನನ್ನು ಐಸೋಲೇಶನ್ ವಾರ್ಡ್‍ಗೆ ಸಿಬ್ಬಂದಿ ರವಾನಿಸಿದ್ದಾರೆ.
Advertisement
Advertisement
ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ವೈರಸ್ ಇದೀಗ ಭಾರತದಲ್ಲಿ ಮರಣ ಮೃದಂಗ ಆರಂಭಿಸಿತೇ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ. ಕೊರೊನಾ ಜ್ವರದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತ್ತು ಲಡಾಕ್‍ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಗುತ್ತಿದೆ. ಕೊರೊನಾ ಜ್ವರ ಶಂಕೆ ಹಿನ್ನೆಲೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.
Advertisement
ದುಬೈನಿಂದ ಮರಳಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಸಾವನ್ನಪ್ಪಿರುವುದು. ಮುರ್ಷಿದಾಬಾದ್ ಜಿಲ್ಲೆಯ ಆ ವ್ಯಕ್ತಿಗೆ ಡಯಾಬಿಟಿಸ್ ಕೂಡ ಇತ್ತು. ಇರಾನ್‍ನಿಂದ ಮರಳಿದ್ದ ಲಡಾಕ್ ವ್ಯಕ್ತಿಗೂ ಕೊರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಇದು ಭಾರತದಲ್ಲಿ ಮೊದಲ ಕೊರೊನಾ ಶಂಕಿತರ ಸಾವಿನ ಪ್ರಕರಣ ಎನ್ನಲಾಗಿದೆ. ಇದುವರೆಗೂ ಜಗತ್ತಿನಾದ್ಯಂತ ಕೊರೊನಾ ಸಾವಿನ ಸಂಖ್ಯೆ 3,556ಕ್ಕೆ ಏರಿಕೆ ಆಗಿದೆ.