ಮಂಗಳೂರು: ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ನೀಡುವ ದೇಶದ ಸ್ವಚ್ಛ ವಿಮಾನ ನಿಲ್ದಾಣ ಪ್ರಶಸ್ತಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
ನವದೆಹಲಿಯಲ್ಲಿ ನಡೆದ 23ನೇ ವಾರ್ಷಿಕ ಸಮಾರಂಭದಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿವಿ ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದರು. ದೇಶದ 53 ವಿಮಾನ ನಿಲ್ದಾಣಗಳಲ್ಲಿ ಸಮೀಕ್ಷೆ ನಡೆಸಿ ಎಎಐ ಮಂಗಳೂರು ವಿಮಾನ ನಿಲ್ದಾಣವನ್ನು ದೇಶದ ಅತ್ಯಂತ ಸ್ವಚ್ಛ ನಿಲ್ದಾಣ ಎಂದು ತೀರ್ಮಾನಿಸಿ ಪ್ರಶಸ್ತಿ ನೀಡಿದೆ.
Advertisement
Advertisement
Advertisement
ಮಂಗಳೂರು ವಿಮಾನ ನಿಲ್ದಾಣ ಶುಚಿತ್ವದ ಜವಾಬ್ದಾರಿಯನ್ನು ದುರ್ಗಾ ಫೆಸಿಲಿಟಿ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇವಾ ಸಂಸ್ಥೆಗೆ ವಹಿಸಲಾಗಿದೆ.
Advertisement
ದೇಶದ್ಯಾಂತ ಸಮೀಕ್ಷೆ ನಡೆಸಿದ ಎಎಐ ಮಂಡಳಿಯ ಅಧಿಕಾರಿಗಳು ವಿಮಾನ ನಿಲ್ದಾಣದ ಟರ್ಮಿನಲ್, ಪಾರ್ಕಿಂಗ್ ಪ್ರದೇಶ, ಶೌಚಾಲಯ, ವಾಣಿಜ್ಯ ಮಳಿಗೆಗಳು ಹಾಗೂ ನಿಲ್ದಾಣದ ರಸ್ತೆ ಸೇರಿದಂತೆ ಪ್ರಯಾಣಿಕರ ಕೊಠಡಿಗಳ ಸ್ವಚ್ಛತೆಯ ಬಗ್ಗೆ ಸಮೀಕ್ಷೆ ನಡೆಸಿದ್ದರು.