ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಸ್ಫೋಟಕಗಳನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಡ್ರಿಲ್ ಶುರು ಮಾಡಿದ್ದಾರೆ.
ಮಂಗಳೂರು ನಗರದ ಬಂದರು ಠಾಣಾ ವ್ಯಾಪ್ತಿಯ ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಜನವಸತಿ ಇರುವ ಕಟ್ಟಡದ ಸ್ಟೆಪ್‍ನ ಬಳಿ ಇದ್ದ ರೂಂ ಒಂದರಲ್ಲಿ 1,725 ಕೆ.ಜಿ ಗೂ ಹೆಚ್ಚು ಸ್ಟೋಟಕ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಮುಡಿಪುವಿನ ನಿವಾಸಿ ಆನಂದ್ ಗಟ್ಟಿ ಎಂಬಾತ ಇದನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿದ್ದ. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
Advertisement
ಒಟ್ಟು 1ಲಕ್ಷದ 11 ಸಾವಿರ ಮೌಲ್ಯದ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಸಲ್ಫರ್ ಪೌಡರ್ 400 ಕೆ.ಜಿ ಪೊಟ್ಯಾಸಿಯಮ್ ನೈಟ್ರೇಟ್ 350 ಕೆ.ಜಿ ಬೇರಿಯಂ ನೈಟ್ರೇಟ್ 50 ಕೆ.ಜಿ ಪೊಟ್ಯಾಸಿಯಮ್ ಕ್ಲೋರೈಟ್ 395 ಕೆ.ಜಿ, ಅಲ್ಯೂಮಿನಿಯಂ ಪೌಡರ್ 260 ಕೆ.ಜಿ ಚಾರ್ ಕೋಲ್ 240 ಕೆ.ಜಿ ಲೀಡ್ ಬಾಲ್ಸ್ 30 ಕೆ.ಜಿ ಯರ್ ಪಿಸ್ತೂಲ್ ಪೆಲೆಟ್ಸ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಂದರು ಏರಿಯಾದಲ್ಲೇ ಗನ್ ಶಾಪ್ ಹೊಂದಿದ್ದು ತನಿಖೆ ಸಂದರ್ಭ ಕಲ್ಲು ಕ್ವಾರೆಯವರಿಗೆ, ಬಾವಿ ತೋಡುವವರಿಗೆ ಈ ಸ್ಫೋಟಕಗಳನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement
ಆರೋಪಿಗೆ ಎಲ್ಲಿಂದ ಈ ರೀತಿಯ ಸ್ಫೋಟಕ ಕಚ್ಛಾ ವಸ್ತುಗಳು ಬರ್ತಿತ್ತು, ಯಾರ್ಯಾರು ಇಲ್ಲಿಂದ ಖರೀದಿ ಮಾಡ್ತಿದ್ರು ಎಂಬ ಬಗ್ಗೆಯು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ಸುಲಭವಾಗಿ ಸ್ಫೋಟಕ ಕಚ್ಛಾವಸ್ತುಗಳು ಸಿಗುತ್ತೆ ಎಂಬುದು ನಿಜಕ್ಕೂ ಆತಂಕಕಾರಿ ವಿಷಯ.
Advertisement