– ಸೊಸೆ, ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ಅತ್ತೆ – ಮಾವನಿಗೆ ಗೊತ್ತೇ ಇಲ್ಲ
ಮಂಗಳೂರು: ಪತ್ನಿ ಹಾಗೂ ಮಗುವನ್ನು ಕೊಂದು ಪತಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು (Mangaluru) ಹೊರವಲಯದ ಪಕ್ಷಿಕೆರೆಯಲ್ಲಿ (Pakshikere) ನಡೆದಿದೆ.
Advertisement
ಸಹಕಾರಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಭಟ್ (32) ತನ್ನ ಪತ್ನಿ ಪ್ರಿಯಾಂಕ (28) ಹಾಗೂ ಮಗು ಹೃದಯ್‌ನನ್ನು (4) ಹತ್ಯೆಗೈದು ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿಗೆ ಅತ್ತೆ ಮಾವನೊಂದಿಗೆ ಮನಸ್ತಾಪ ಇದ್ದ ಹಿನ್ನೆಲೆ ಕಾರ್ತಿಕ್ ಕುಟುಂಬ ಮನೆಯ ಕೋಣೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಾರ್ತಿಕ್ ತಂದೆ ಜನಾರ್ದನ ಭಟ್ ಪಕ್ಷಿಕೆರೆ ಜಂಕ್ಷನ್‌ನಲ್ಲಿ ಹೋಟೆಲ್ ನಡೆಸಿಕೊಂಡಿದ್ದು, ಎಂದಿನಂತೆಯೇ ಶುಕ್ರವಾರವೂ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಹೆಂಡತಿ ಮಗುವನ್ನು ಕಾರ್ತಿಕ್ ಹತ್ಯೆ ಮಾಡಿದ್ದ. ಹತ್ಯೆಯ ಬಳಿಕ ಮಧ್ಯಾಹ್ನದ ವೇಳೆಗೆ ರೈಲಿಗೆ ತಲೆ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು
Advertisement
Advertisement
ಮನಸ್ತಾಪದ ಹಿನ್ನೆಲೆ ಶುಕ್ರವಾರ ರಾತ್ರಿಯೂ ಮಗ, ಸೊಸೆ ಹಾಗೂ ಮೊಮ್ಮಗ ಕೋಣೆಯಲ್ಲಿಯೇ ಇದ್ದಾರೆಂದು ಮಾವ ಜನಾರ್ದನ ಭಟ್ ಭಾವಿಸಿ ಶನಿವಾರ ಕೂಡ ಎಂದಿನಂತೆಯೇ ಹೋಟೆಲ್‌ಗೆ ತೆರಳಿದ್ದರು. ಇತ್ತ ಕಾರ್ತಿಕ್ ಮೃತದೇಹ ಪತ್ತೆಯಾದ ಕಾರಣ ಆತನ ವಿಳಾಸ ಹುಡುಕಿಕೊಂಡು ಪೊಲೀಸರು ಮನೆಗೆ ಬಂದಿದ್ದಾರೆ. ಕೋಣೆಯ ಬಾಗಿಲು ತೆರೆದು ನೋಡಿದಾಗ ಪತ್ನಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರಾಗಿದ್ದರು. ಮಾತುಕತೆ ಇಲ್ಲದ ಕಾರಣ ಸೊಸೆ ಹಾಗೂ ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ವೃದ್ಧ ಅತ್ತೆ ಮಾವನಿಗೆ ಗೊತ್ತೇ ಆಗಿರಲಿಲ್ಲ. ಇದನ್ನೂ ಓದಿ: ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್ | ಮರ್ಡರ್ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ
Advertisement
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ತಿಕ್ ತನ್ನ ಹೆಂಡತಿ ಹಾಗೂ ಮಗುವನ್ನು ಗ್ಲಾಸ್ ಪೀಸ್‌ನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಕಾರ್ತಿಕ್ ಮೃತದೇಹ ಪತ್ತೆಯಾಗಿತ್ತು. ಇಂದು ಮಧ್ಯಾಹ್ನದ ವೇಳೆಗೆ ಕಾರ್ತಿಕ್ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಾರ್ತಿಕ್ ಕುಟುಂಬಕ್ಕೆ ಮೂರು ವರ್ಷದಿಂದ ತಂದೆ-ತಾಯಿ ಜೊತೆ ಮಾತುಕತೆ ಇರಲಿಲ್ಲ. ಶುಕ್ರವಾರ ರಾತ್ರಿ ಕಾರ್ತಿಕ್ ಕುಟುಂಬ ಹೊರಗೆ ಹೋಗಿರಬಹುದು ಎಂದು ಕಾರ್ತಿಕ್ ತಂದೆ ಭಾವಿಸಿದ್ದರು. ಇಂದು ಮಧ್ಯಾಹ್ನವೇ ಅವರಿಗೆ ವಿಷಯ ಗೊತ್ತಾಗಿದೆ ಎಂದರು. ಇದನ್ನೂ ಓದಿ: ಈ ಸರ್ಕಾರ ತೆಗೆಯೋವರೆಗೆ ಮನೆಯಲ್ಲಿ ಮಲಗಲ್ಲ – ಗುಡುಗಿದ ಗೌಡರು
ಕಾರ್ತಿಕ್ ಇತ್ತೀಚಿಗೆ ಆರ್ಥಿಕ ಸಮಸ್ಯೆಯಿಂದ ಇರೋದು ಕೂಡಾ ಗೊತ್ತಾಗಿದೆ. ವಾಷ್‌ರೂಂನ ಕಿಟಕಿ ಗ್ಲಾಸ್ ಒಡೆದು ಪತ್ನಿ, ಮಗುವಿನ ಹತ್ಯೆ ಮಾಡಿದ್ದಾನೆ. ಇಬ್ಬರ ದೇಹದ ಬೇರೆ ಬೇರೆ ಭಾಗದಲ್ಲಿ ಗಾಯಗಳಾಗಿವೆ. ಕೋಣೆಯಲ್ಲೇ ಫ್ಯಾನ್‌ಗೆ ನೇಣುಹಾಕಲು ಯತ್ನಿಸಿದ್ದಾನೆ. ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ತಿಕ್ ಕೃತ್ಯ ಎಸಗುವ ಮುನ್ನ ಸುಧೀರ್ಘ ಡೆತ್‌ನೋಟ್ ಬರೆದಿದ್ದಾನೆ. ತನ್ನ ಅಂತ್ಯಸಂಸ್ಕಾರ, ಆಸ್ತಿ ಯಾರ ಪಾಲಾಗಬೇಕೆಂದು ಡೆತ್ ನೋಟ್‌ನಲ್ಲಿದೆ. ತನ್ನ ತಂದೆ ತಾಯಿ ಅಂತ್ಯಸಂಸ್ಕಾರ ಮಾಡಬಾರದು ಎಂಬುವುದು ಉಲ್ಲೇಖಿಸಿದ್ದಾನೆ. ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಎಂದು ಡೆತ್‌ನೋಟ್ ನಲ್ಲಿ ಬರೆದಿದ್ದಾನೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರು. ಆಕೆಯ ಹೆತ್ತವರು ಬಂದ ಬಳಿಕ ಶವ ಪೋಸ್ಟ್ಮಾರ್ಟಂಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ದೇವರ ಹುಂಡಿ ಹಣಕ್ಕೂ ಖನ್ನಾ ಹಾಕಿದ್ರಾ ಅಧಿಕಾರಿಗಳು?