ಭಾರತದ ವಿವಾಹವು ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಾಂಪ್ರದಾಯನ್ನು ತೋರಿಸುತ್ತದೆ. ಧರ್ಮವನ್ನು ಹೊರತು ಪಡಿಸಿ ದೇಶಾದ್ಯಂತ ಆಚರಿಸುವ ಸಾಮಾನ್ಯ ಆಚರಣೆ ಅಂದರೆ ಮಂಗಳ ಸೂತ್ರ ಎಂಬ ಪವಿತ್ರವಾದ ಗಂಟನ್ನು ಕಟ್ಟುವುದು. 6ನೇ ಶತಮಾನದಿಂದ ಈ ಪದ್ದತಿ ಅಸ್ತಿತ್ವದಲ್ಲಿದ್ದು, ವರನು ವಧುವಿನ ಕುತ್ತಿಗೆಗೆ ಹಳದಿ ದಾರವನ್ನು ಕಟ್ಟುತ್ತಾನೆ. ಇದು ಜೀವಮಾನದ ಬಾಂಧವ್ಯದ ಸಂಕೇತವೆಂದೇ ಪರಿಗಣಿಸಲಾಗಿದೆ ಮತ್ತು ಇದು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ. ಇದನ್ನೂ ಓದಿ:ಅಕ್ಕ, ತಂಗಿ ಇಬ್ಬರಿಗೂ ತಾಳಿಕಟ್ಟಿದ ವರ
Advertisement
ಮಹಿಳೆಯರು ಹಲವಾರು ಆಭರಣಗಳನ್ನು ಧರಿಸಿದರೂ, ಮಂಗಳ ಸೂತ್ರವಿಲ್ಲದೇ ಇರಲು ಸಾಧ್ಯವಿಲ್ಲ. ಮಂಗಳಸೂತ್ರವು ಸಾಂಪ್ರದಾಯಿಕ ಭಾರತೀಯ ಮಹಿಳೆಯರು ಮದುವೆಯಾಗಿರುವುದನ್ನು ತಿಳಿಸುವುದರ ಜೊತೆಗೆ ಸಮಾಜದಲ್ಲಿ ವಧುವಿನ ಗೌರವವನ್ನು ಹೆಚ್ಚಿಸುತ್ತದೆ. ದಕ್ಷಿಣ ಭಾರತದ ಕಡೆ, ಮಂಗಳಸೂತ್ರವು ಹಳದಿ ಬಣ್ಣದ ದಾರ ಮತ್ತು ಚಿನ್ನದ ತಾಳಿಬೊಟ್ಟನ್ನು ಹೊಂದಿರುತ್ತದೆ. ಮತ್ತೆ ಉಳಿದ ಭಾಗಗಳಲ್ಲಿ ಕಪ್ಪುಮಣಿಗಳಿಂದ ವಿನ್ಯಾಸಗೊಳಿಸಲಾದ ಬಟ್ಟಲಿನ ಆಕಾರದ ಪೆಂಡೆಂಟ್‍ಗಳ ರೀತಿಯ ಮಂಗಳಸೂತ್ರಗಳಿರುತ್ತದೆ.
Advertisement
Advertisement
ಮಂಗಳ ಸೂತ್ರ ಪದದ ಅರ್ಥ ಮಂಗಳ ಎಂದರೆ ಮಂಗಳಕರ, ಸೂತ್ರ ಎಂದರೆ ದಾರ. ಪ್ರಾಚೀನ ಹಿಂದೂ ಸಂಪ್ರಾದಾಯದ ಪ್ರಕಾರ ಮಂಗಳ ಸೂತ್ರವನ್ನು ವಿವಾಹಿತ ಮಹಿಳೆ ತನ್ನ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಧರಿಸುತ್ತಾರೆ. ಆದರೆ ಪತಿ ತೀರಿಕೊಂಡ ನಂತರವಷ್ಟೇ ಮಂಗಳಸೂತ್ರವನ್ನು ಅವರ ಕುತ್ತಿಗೆಯಿಂದ ತೆಗೆಬೇಕಾಗುತ್ತದೆ. ಅಲ್ಲದೇ ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ರೀತಿಯ ಮಂಗಳ ಸೂತ್ರಗಳಿದ್ದು, ಪ್ರತಿಯೊಂದು ಸಂಸ್ಕೃತಿಯೂ ಬೇರೆ ಬೇರೆ ಅರ್ಥವನ್ನು ತಿಳಿಸುತ್ತದೆ ಮತ್ತು ವಿಭಿನ್ನ ರೀತಿಯ ಮಂಗಳ ಸೂತ್ರವನ್ನು ಹೊಂದಿರುತ್ತದೆ. ಈ ಕುರಿತ ಕೆಲವು ಮಾಹಿತಿ ಈ ಕೆಳಗಿನಂತಿದೆ. ಇದನ್ನೂ ಓದಿ:ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ
Advertisement
ಕರ್ನಾಟಕ ಮಂಗಳಸೂತ್ರ
ಈ ಮಂಗಳ ಸೂತ್ರವನ್ನು ಕಾರ್ತಮಣಿ ಪಾಠಕ್ ಎಂದು ಕರೆಯಲಾಗುತ್ತದೆ. ಕೂರ್ಗ್ ಪ್ರದೇಶದ ಯಾವುದೇ ಕೊಡವ ವಧುವಿಗೆ ಇದು ಬಹಳ ಅತ್ಯಂತ ಪ್ರಮುಖ ಆಭರಣವಾಗಿದೆ. ಕಾರ್ತಮಣಿ ಮತ್ತು ಪಾಠಕ್ ಎರಡು ಪ್ರತ್ಯೇಕ ಆಭರಣಗಲಾಗಿದ್ದು, ಪಾಠಕ್ ಎಂದರೆ ಚಿನ್ನದ ಪೆಂಡೆಂಟ್ ಆಗಿರುತ್ತದೆ. ಈ ಪೆಂಡೆಂಟ್‍ಗಳನ್ನು ಲಕ್ಷ್ಮೀ ಭಾವಚಿತ್ರಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಇನ್ನೂ ಕಾರ್ತಮಣಿ ಎಂದರೆ ನಾಣ್ಯದ ಸುತ್ತಲೂ ಸಣ್ಣ ಮಾಣಿಕ್ಯವನ್ನು ಅಳವಡಿಸಲಾಗಿರುತ್ತದೆ.
ತಮಿಳುನಾಡು ಮಂಗಳಸೂತ್ರ
ಈ ಮಂಗಳಸೂತ್ರವನ್ನು ತಾಳಿ ಕೋಡಿ ಎಂದು ಕರೆಯಲಾಗುತ್ತದೆ. ಇದು ಒಗ್ಗಟ್ಟು, ಬದ್ಧತೆ, ಗೌರವ ಮತ್ತು ಇಬ್ಬರ ನಡುವಿನ ಪರಸ್ಪರ ಪ್ರೀತಿಯ ಅರ್ಥವನ್ನು ತಿಳಿಸುತ್ತದೆ. ಇದರಲ್ಲಿ ತಾಳಿಯ ಮುದ್ರೆಗಳು, ಎಲೆಗಳಿರುತ್ತದೆ. ಇದನ್ನೂ ಓದಿ:ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು
ಆಂಧ್ರ ಪ್ರದೇಶದ ಮಂಗಳಸೂತ್ರ
ತೆಲುಗು ಮಂಗಳ ಸೂತ್ರ ಎರಡು ಸುತ್ತಿನ ನಾಣ್ಯಗಳನ್ನು ಹೊಂದಿರುತ್ತದೆ. ವರನ ಕಡೆಯವರು ಮತ್ತು ವಧುವಿನ ಕಡೆಯವರಿಬ್ಬರು ಒಂದೊಂದು ನಾಣ್ಯಗಳನ್ನು ಮದುವೆಯ ಸಮಯದಲ್ಲಿ ನೀಡುತ್ತಾರೆ. ಇದನ್ನು ಹಳದಿ ಬಣ್ಣದ ದಾರದಲ್ಲಿ ಕಟ್ಟಲಾಗಿರುತ್ತದೆ. ಈ ಮಂಗಳಸೂತ್ರವು ಎರಡು ಕುಟುಂಬಗಳ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ. ಇದನ್ನೂ ಓದಿ:ಕುಖ್ಯಾತ ಮನೆಗಳ್ಳನ ಬಂಧನ- 150 ಗ್ರಾಂ ಚಿನ್ನಾಭರಣ ವಶ
ಕೇರಳ ಮಂಗಳಸೂತ್ರ
ಇದನ್ನು ಕ್ರಿಶ್ಚಿಯನ್ನರಲ್ಲಿ ಮಿನ್ನು ಹಾಗೂ ಹಿಂದೂಗಳಲ್ಲಿ ತಾಳಿ ಎಂದು ಕರೆಯುತ್ತಾರೆ. ಮಿನ್ನು ಪ್ರೀತಿಯ ಸಂಕೇತಿಸುವ ಹೃದಯದ ಆಕಾರದ ಚಿನ್ನದ ಪೆಂಡೆಂಟ್‍ನಿಂದ ವಿನ್ಯಾಸಗೊಳಿಸಲಾಗಿರುತ್ತದೆ ಹಾಗೂ ಕ್ರಾಸ್ ಸಿಂಬಲ್ ಪತಿ ಹಾಗೂ ಪತ್ನಿ ನಡುವಿನ ಸಂಬಂಧ ಸೂಚಿಸುತ್ತದೆ.
ಮಹಾರಾಷ್ಟ್ರ ಮಂಗಳಸೂತ್ರ
ಮಹಾರಾಷ್ಟ್ರ ಮಂಗಳಸೂತ್ರವನ್ನು ಕಪ್ಪು ಬಣ್ಣದ ಮಣಿಯಿಂದ ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ ಬಟ್ಟಲಿನ ಆಕಾರದ ಎರಡು ನಾಣ್ಯಗಳಿರುತ್ತದೆ. ಇದರಲ್ಲಿ ಶಿವ ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಮಣಿಗಳ ಎರಡು ಎಳೆಗಳು ಗಂಡ ಮತ್ತು ಹೆಂಡತಿಯ ಸಂಕೇತವಾಗಿದ್ದು, ಕಪ್ಪು ಮಣಿಗಳು ದುಷ್ಟ ಕಣ್ಣನಿಂದ ದೂರವಿರಿಸುವುದರ ಜೊತೆಗೆ ಸಂತೋಷದಿಂದ ದಾಂಪತ್ಯ ಜೀವನವನ್ನು ನಡೆಸಲು ಸಹಾಯಕವಾಗಿದೆ. ಇದನ್ನೂ ಓದಿ:ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ