ಮಂಗಳೂರು: ಮಧ್ಯವಯಸ್ಕ ವ್ಯಕ್ತಿಯೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋ ಚಿತ್ರೀಕರಿಸಿ ಯುವತಿಯೇ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಅಬ್ದುಲ್ ರಹಿಮಾನ್ ಒಂಬತ್ತು ಮಕ್ಕಳ ತಂದೆಯಾಗಿದ್ದು, ಈತನಿಗೆ ಎಂಟು ತಿಂಗಳ ಹಿಂದೆ ಯುವತಿಯ ಪರಿಚಯ ಆಗಿತ್ತು. ಬಳಿಕ ಮಂಗಳೂರಿನ ಲಾಡ್ಜ್ ನಲ್ಲಿ ಇಬ್ಬರು ರೂಂ ಮಾಡಿದ್ದರು. ಅಲ್ಲಿ ರಹಿಮಾನ್ ಯುವತಿಯೊಂದಿಗೆ ಸರಸ ಸಲ್ಲಾಪ ನಡೆಸಿದ್ದಾನೆ.
ಇದೀಗ ಇವರಿಬ್ಬರ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಬಂಟ್ವಾಳ ಪೊಲೀಸರು ರಹಿಮಾನ್‍ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹನಿಟ್ರಾಪ್ ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ಕೊಡಗು ಮೂಲದವಳಾಗಿದ್ದು, ಮಂಗಳೂರಿನಲ್ಲಿ ಲಾಡ್ಜ್ ವೊಂದರಲ್ಲಿ ಲೈಂಗಿಕ ಕ್ರಿಯೆ ಮಾಡುವಾಗ ಯುವತಿ ವಿಡಿಯೋ ಮಾಡಿಕೊಂಡಿದ್ದಳು. ಬಳಿಕ ನಾಲ್ವರ ಅಪರಿಚಿತರು ಸೇರಿ, ಯುವತಿ ಜೊತೆಗಿದ್ದ ವಿಡಿಯೋ ಮುಂದಿಟ್ಟು ರಹಿಮಾನ್‍ನನ್ನು ಹಣಕ್ಕಾಗಿ ಪೀಡಿಸಿದ್ದರು. ಬಳಿಕ ರಹಿಮಾನ್ ನನ್ನು ಅಪಹರಿಸಿ, 1.8 ಲಕ್ಷ ರೂ. ಲಪಟಾಯಿಸಿದ್ದರು.
ಅಲ್ಲದೇ ಆತನ ಎಟಿಎಂ ಪಡೆದು 9 ಸಾವಿರ ರೂ ಅನ್ನು ಅವರೇ ಡ್ರಾ ಮಾಡಿಕೊಂಡಿದ್ದರು ಅನ್ನುವ ವಿಚಾರವನ್ನು ರಹಿಮಾನ್ ಪೊಲೀಸರಿಗೆ ಬಾಯಿಬಿಟ್ಟಿದ್ದಾನೆ. ಇದೀಗ ಯುವತಿ ಸೇರಿದಂತೆ ನಾಲ್ವರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಪಲ ತೀರದ ವೃದ್ಧನನ್ನು ಯುವತಿ ಮತ್ತು ತಂಡ ಸೇರಿ ಹನಿಟ್ರಾಪ್ ಮಾಡಿದ್ದಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.