2100ರ ಹೊತ್ತಿಗೆ ಮುಳುಗಲಿದ್ಯಂತೆ ಮಂಗಳೂರು- ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಸಾ ಸಿದ್ಧಪಡಿಸಿದೆ ಬೆಚ್ಚಿಬೀಳಿಸೋ ವರದಿ

Public TV
2 Min Read
MND FLOOD NASA COLLAGE

ಮಂಗಳೂರು: ಇದು ರಾಜ್ಯದ ಕರಾವಳಿ ಭಾಗದ ಜನರಿಗೆ ದೊಡ್ಡ ಬರಸಿಡಿಲಿನಂಥ ಸುದ್ದಿ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಪ್ರಕಾರ, ಇನ್ನು ಕೇವಲ ನೂರು ವರ್ಷಗಳಲ್ಲಿ ನಮ್ಮ ರಾಜ್ಯದ ಹೆಬ್ಬಾಗಿಲು ಎಂದು ಗುರುತಿಸಲ್ಪಟ್ಟಿರುವ ಮಂಗಳೂರು ನಗರ ಪೂರ್ತಿಯಾಗಿ ಸಮುದ್ರದಲ್ಲಿ ಮುಳುಗಲಿದೆಯಂತೆ.

ಹೌದು. 2100ರ ವೇಳೆಗೆ ಮಂಗಳೂರು ನಗರವೇ ಸಮುದ್ರದಲ್ಲಿ ಲೀನವಾಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇಂಥ ಶಾಕಿಂಗ್ ನ್ಯೂಸ್ ಕೊಟ್ಟಿದ್ದು ಯಾರೋ ಜ್ಯೋತಿಷಿಗಳಲ್ಲ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ. ವಿಜ್ಞಾನಿಗಳು ನೀಡಿರೋ ವರದಿ ಪ್ರಕಾರ ಇನ್ನೈವತ್ತು ಅಥವಾ ನೂರು ವರ್ಷಗಳಲ್ಲಿ ಮಂಗಳೂರು ನಗರ ಸಮುದ್ರದಲ್ಲಿ ಲೀನವಾಗಲಿದೆಯಂತೆ.

MNG FLOOD NASA 1

ಭೂಮಿಯ ತಾಪಮಾನ ಏರುತ್ತಿರುವುದರಿಂದ ಮಂಜುಗಡ್ಡೆಗಳು ಕರಗಲಾರಂಭಿಸಿದ್ದು, ಇಂಥ ಸ್ಥಿತಿ ಹೀಗೆ ಮುಂದುವರೆದಲ್ಲಿ 2100ರ ವೇಳೆಗೆ ದೇಶದ ಕರಾವಳಿ ಭಾಗದ ನಗರಗಳು ಸಮುದ್ರದಲ್ಲಿ ಮುಳುಗಲಿದ್ಯಂತೆ. ನಾಸಾ ವಿಜ್ಞಾನಿಗಳು ತಯಾರಿಸಿರೋ ಗ್ರೇಡಿಯಂಟ್ ಫಿಂಗರ್ ಪ್ರಿಂಟ್ ಮ್ಯಾಪಿಂಗ್ ಎನ್ನುವ ಹವಾಮಾನ ಮುನ್ಸೂಚನೆ ನೀಡುವ ಮಾಪಕ ಈ ಮಾಹಿತಿ ನೀಡಿದೆ.

ಈ ಉಪಕರಣ ಮಂಜುಗಡ್ಡೆ ಕರಗುವಿಕೆಯಿಂದ ಜಗತ್ತಿನ ಯಾವ ಭಾಗದಲ್ಲಿ ಸಮುದ್ರ ಮಟ್ಟ ಎಷ್ಟರ ಮಟ್ಟಿಗೆ ಏರಿಕೆಯಾಗಲಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿದ್ದು, ಅದರ ಪ್ರಕಾರ ಜಗತ್ತಿನ 290 ಬಂದರು ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರ ಪ್ರಕಾರ ಅಮೆರಿಕದ ನ್ಯೂಯಾರ್ಕ್, ಮಹಾರಾಷ್ಟ್ರದ ಮುಂಬೈ ಮತ್ತು ಕರ್ನಾಟಕದ ಮಂಗಳೂರು ಅಪಾಯದ ಮಟ್ಟದಲ್ಲಿದ್ಯಂತೆ. ಕೊಲ್ಕತ್ತಾ ಮತ್ತು ಆಂಧ್ರ ಪ್ರದೇಶದ ಕಾಕಿನಾಡ ನಗರಗಳು ನಂತರದ ಸ್ಥಾನದಲ್ಲಿದೆ ಎನ್ನಲಾಗಿದೆ.

ಉಪಕರಣ ನೀಡುತ್ತಿರೋ ಮಾಹಿತಿ ಪ್ರಕಾರ, 2100ರ ಹೊತ್ತಿಗೆ ಒಂದು ಮೀಟರ್ ನಷ್ಟು ಸಮುದ್ರ ಮಟ್ಟ ಏರಿಕೆಯಾಗಲಿದೆ. ಹಾಗೊಂದು ವೇಳೆ ಆದಲ್ಲಿ ಭಾರತದ 14 ಸಾವಿರ ಚದರ ಕಿಮೀ ವ್ಯಾಪ್ತಿಯ ಭೂಪ್ರದೇಶ ಸಮುದ್ರದಲ್ಲಿ ಸೇರಿಕೊಳ್ಳಲಿದೆ. ಇದರಿಂದಾಗುವ ನಾಶ- ನಷ್ಟ ಊಹನಾತೀತ ಎನ್ನುವ ಅಂಶವನ್ನು ವರದಿ ಹೇಳಿದೆ.

ಇದನ್ನೂ ಓದಿ: ಗುಣಮಟ್ಟದ ಜೀವನಕ್ಕೆ ಏಷ್ಯಾದಲ್ಲೇ ಮಂಗಳೂರು ನಂಬರ್ ಒನ್, ವಿಶ್ವದಲ್ಲಿ 7ನೇ ಸ್ಥಾನ

MNG FLOOD NASA 9

ವಿಶ್ವದ ಒಟ್ಟು ನೀರಿನ ಪ್ರಮಾಣದಲ್ಲಿ ಶೇಕಡ 75ರಷ್ಟು ಅಂಟಾರ್ಟಿಕಾ ಮತ್ತು ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ರೂಪದಲ್ಲಿದ್ದು, ತಾಪಮಾನ ಏರುತ್ತಾ ಹೋದರೆ ಭೂಮಿಯ ಗತಿ ಶೋಚನೀಯ ಎನ್ನುವ ಮಾಹಿತಿಯನ್ನೂ ವರದಿ ಹೇಳಿದೆ.

ವರದಿ ಪ್ರಕಾರ 2100ರ ವೇಳೆಗೆ ಮಂಗಳೂರಿನ ಸಮುದ್ರ ಮಟ್ಟ 10.98 ಸೆಂಟಿಮೀಟರ್ ಇದ್ದರೆ, ಮುಂಬೈನಲ್ಲಿ 15.26 ಸೆ.ಮೀ ಹಾಗೂ ನ್ಯೂಯಾರ್ಕ್ ನಲ್ಲಿ 10.65 ಸೆ.ಮೀ ಇರಲಿದೆ. ಈ ಹಿಂದಿನ ವರದಿಯಲ್ಲಿ ಮುಂಬೈ ಮತ್ತು ನ್ಯೂಯಾರ್ಕ್ ನಗರಗಳು ಮಾತ್ರ ಅಪಾಯದ ಮಟ್ಟದಲ್ಲಿದ್ದವು. ಈಗಿನ ವರದಿ ಪ್ರಕಾರ ಮಂಗಳೂರು ನಗರ ಅಪಾಯಕಾರಿ ಪಟ್ಟಿಗೆ ಸೇರ್ಪಡೆಯಾಗಿರುವುದು ಹೊಸ ಬೆಳವಣಿಗೆ.

MNG FLOOD NASA 10

MNG FLOOD NASA 7

MNG FLOOD NASA 8

MNG FLOOD NASA 6

MNG FLOOD NASA 5

MNG FLOOD NASA 4

MNG FLOOD NASA 3

MNG FLOOD NASA 2

Share This Article
Leave a Comment

Leave a Reply

Your email address will not be published. Required fields are marked *