ಮಂಗಳೂರು: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು ಆಗಿರುವ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್‍ನಲ್ಲಿ ನಡೆದಿದೆ.
ಮೃತ ಯುವಕರನ್ನು 28 ವರ್ಷದ ಕಾವೂರಿನ ಗುರುಪ್ರಸಾದ್ ಮತ್ತು 32 ವರ್ಷದ ಬಜ್ಪೆ ಗ್ರಾಮದ ನಿವಾಸಿ ಸುಜಿತ್ ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನೂ ಇಬ್ಬರು ನೀರುಪಾಲಾಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
‘ಕೆಸರ್ಡೊಂಜಿ ದಿನ’ ಎಂಬ ಕಾರ್ಯಕ್ರಮದ ಅಂಗವಾಗಿ ಕೆಸರಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯುವಕರು ಮೈಯಲ್ಲಾ ಕೆಸರಾಗಿದ್ದ ಕಾರಣ ಸ್ನಾನ ಮಾಡಲು ಸಮುದ್ರಕ್ಕೆ ಇಳಿದಿದ್ದಾರೆ. ಈ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.