ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲು.ಎಚ್.ಓ) ಡೈರಕ್ಟರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ಇಬ್ಬರು ಕಾಶ್ಮೀರ ಮೂಲದ ಶಂಕಿತ ವ್ಯಕ್ತಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಾಕ್‍ನ ಗಡಿ ಜಿಲ್ಲೆ ಗಂದರ್ಬಲ್ ಗಂಜೀಪುರ್ ನಿವಾಸಿ ಶೌಕತ್ ಆಲಿ (28) ಮತ್ತು ಆತನ ಡ್ರೈವರ್ ಎಂದು ಹೇಳಿಕೊಂಡಿದ್ದ ಬಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತರು ಡಬ್ಲು.ಎಚ್.ಓ ನಿರ್ದೇಶಕ ಎಂದು ಬೋರ್ಡ್ ಹಾಕಿಕೊಂಡು ಐಷಾರಾಮಿ ಕಾರಲ್ಲಿ ತಿರುಗಾಡುತ್ತಿದ್ದರು ಎನ್ನಲಾಗಿದೆ.
Advertisement
Advertisement
ಕಾರಿನಲ್ಲಿದ್ದ ಬೋರ್ಡ್ ಬಗ್ಗೆ ಸಂಶಯ ಬಂದು ಆಗಸ್ಟ್ 17 ರಂದು ಇವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಶೌಕತ್ ಅಲಿ ಮುಂಬೈ ಮೂಲದ ಡಾ. ಬಸೀತ್ ಷಾ ಎಂಬ ಹೆಸರಲ್ಲಿ ಮ್ಯಾಟ್ರಿಮೊನಿಗೆ ನೋಂದಣಿ ಮಾಡುತ್ತಿದ್ದ. ನಂತರ ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗಿ ಬಳಿಕ ದುಬೈಗೆ ತೆರಳಿ, ಉಗ್ರರಿಗೆ ಯುವತಿಯರನ್ನು ಮಾರುತ್ತಿದ್ದ ಎಂದು ಹೇಳಲಾಗಿದೆ.
Advertisement
Advertisement
ಗೋವಾ, ಬೆಳಗಾವಿ, ಮುಂಬೈ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿ ದೇಶಾದ್ಯಂತ ಲಿಂಕ್ ಇರುವ ಶೌಕತ್ ಅಲಿ, ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿ ಯುವತಿಯರನ್ನು ಜಾಲಕ್ಕೆ ಬೀಳಿಸುತ್ತಿದ್ದ ಎಂದು ಶಂಕಿಸಲಾಗಿದೆ. ಈ ವಿಚಾರವಾಗಿಯೇ ಯುವತಿಯೊಬ್ಬಳ ಸಂಪರ್ಕಿಸಲು ಮಂಗಳೂರಿಗೆ ಬಂದಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಾರು ಚಾಲಕ ಬಲ್ವಿಂದರ್ ಸಿಂಗ್ ಸಹಿತ ಶೌಕತ್ ಆಲಿಯ ತೀವ್ರ ವಿಚಾರಣೆಯನ್ನು ಎನ್‍ಐಎ ಸೇರಿದಂತೆ ದೇಶದ ವಿವಿಧ ಏಜೆನ್ಸಿಗಳು ಮಾಡುತ್ತಿವೆ ಎಂದು ಮಂಗಳೂರು ಕಮಿಷನರ್ ಡಾ. ಪಿ.ಎಸ್ ಹರ್ಷ ಹೇಳಿದ್ದಾರೆ.