ಮಂಗಳೂರು: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ದಕ್ಷಿಣ ಕನ್ನಡ ಹೊಯ್ಗೆ(ಮರಳು) ಲಾರಿ ಮಾಲಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಜೈರಾಜ್ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ತುಂಬೆ ಡ್ಯಾಮ್ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿ ಜೈರಾಜ್ ದೂರು ನೀಡಿದ್ದಾರೆ.
ಈ ಎಲ್ಲ ವಿಚಾರದ ಬಗ್ಗೆ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ, ಮರಳು ಮಾರಿದ್ದಾರೆ. ಮೂರು ಸಾವಿರದ ಹೊಯ್ಗೆಯನ್ನು 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಉಡುಪಿಯಲ್ಲಿ ಬ್ಲಾಕ್ ಲಿಸ್ಟಲ್ಲಿರುವ ಕಂಪನಿಗೆ ಜಿಪಿಎಸ್ ಟೆಂಡರ್ ಆಗಿದೆ. ಟಿ ಫೋರ್ ಯು ಎಂಬ ಕಂಪನಿಗೆ ಟೆಂಡರ್ ಕೊಟ್ಟಿದ್ದರಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜೈರಾಜ್ ಆರೋಪಿಸಿದ್ದಾರೆ.
ಹೊಯ್ಗೆ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ಆಗಿದೆ. ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟಿದ್ದರಲ್ಲೂ ಅಕ್ರಮವಾಗಿದೆ ಎಂದು ಜೈರಾಜ್ ಆರೋಪ ಮಾಡಿದ್ದಾರೆ.