ಮಂಗಳೂರು: ಅಯ್ಯಪ್ಪ ಸ್ವಾಮಿ ವೃತಾಧಾರಿಗಳಿಗೆ ಸಸ್ಯಾಹಾರಿ ಊಟ ಇದೆಯೆಂದು ನಂಬಿಸಿ ಮಾಂಸಾಹಾರಿ ಊಟ ನೀಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದ್ದು ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಶಬರಿಮಲೆ ಯಾತ್ರೆ ವೇಳೆ ಕಾಸರಗೋಡು ಚೆರ್ಕಳದ ಹಳ್ಳಿಮನೆ ಎಂಬ ಹೋಟೆಲ್ ನಲ್ಲಿ ಘಟನೆ ನಡೆದಿದೆ. 50 ಜನರಿದ್ದ ಅಯ್ಯಪ್ಪ ವೃತಾಧಾರಿಗಳು ಊಟಕ್ಕೆಂದು ಬಸ್ಸು ನಿಲ್ಲಿಸಿ ಚೆರ್ಕಳದ ಹಳ್ಳಿಮನೆ ಹೋಟೆಲ್ ಗೆ ತೆರಳಿದ್ದರು. ಸಸ್ಯಾಹಾರಿ ಊಟ ನೀಡುತ್ತೇವೆ ಎಂದು ನಂಬಿಸಿ ಬಳಿಕ ಮಾಂಸಹಾರಿ ಉಪಹಾರ ಬಡಿಸಿ ವೃತಾಧಾರಿಗಳಿಗೆ ಅವಮಾನ ಮಾಡಿದ್ದಾರೆ.
Advertisement
Advertisement
ಹೋಟೆಲ್ ಮಾಲೀಕ ತುಂಬಾ ಜನರಿದ್ದ ಕಾರಣ ಮಾಂಸಹಾರಿ ಊಟದ ಹೋಟೆಲ್ ನಲ್ಲಿ ಸಸ್ಯಹಾರಿ ಊಟ ನೀಡಲು ಮುಂದಾಗಿದ್ದ ಎನ್ನಲಾಗಿದೆ. ಆದರೆ ಮಾಂಸಹಾರಿ ಹೋಟೆಲ್ ಎಂದು ಭಾವಿಸಿದ ಅಯ್ಯಪ್ಪ ವೃತಾಧಾರಿಗಳು ಮಾಲೀಕನನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು ಬಳಿಕ ತಿಂದ ಆಹಾರಕ್ಕೆ ಹಣ ನೀಡಿ ಹಿಂದಿರುಗಿದ್ದಾರೆ.