ಲಕ್ನೋ: ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರನ್ನು ಈ ಬಾರಿ ನೂತನ ಮೋದಿ ಸಂಪುಟದಿಂದ ಕೈ ಬಿಡಲಾಗಿದೆ. ಈ ಸಂಬಂಧ ಸಂಪುಟದಿಂದ ಕೈ ಬಿಟ್ಟಿದ್ಯಾಕೆ ಪ್ರಶ್ನೆಗೆ ಉತ್ತರಿಸದೇ ಅವರು ನಡೆದಿದ್ದಾರೆ.
ಈ ಬಾರಿ ಸುಲ್ತಾನಪುರ ಕ್ಷೇತ್ರದಿಂದ ಗೆಲುವು ದಾಖಲಿಸಿರುವ ಮನೇಕಾ ಗಾಂಧಿ ಅಲ್ಲಿಯ ಜನತೆಗೆ ಧನ್ಯವಾದ ತಿಳಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮನೇಕಾ ಗಾಂಧಿ, ನನ್ನನ್ನು ಸಂಪುಟದಿಂದ ಕೈ ಬಿಟ್ಟಿದ್ಯಾಕೆ ಪ್ರಶ್ನೆಗೆ ಸುಲ್ತಾನಪುರ ಕ್ಷೇತ್ರದ ಜನತೆ ಉತ್ತರ ನೀಡಲಿದ್ದಾರೆ. ಈ ಬಾರಿ ಪುತ್ರ ವರುಣ್ ಗಾಂಧಿ ಸಹ ಸೇರ್ಪಡೆಯಾಗಿಲ್ಲ ಎಂಬ ಪ್ರಶ್ನೆ ಕೇಳುತ್ತಿದ್ದಂತೆ, ಸರಿ ಇವಾಗ ನಾವಿನ್ನು ಹೊರಡುತ್ತೇವೆ ಎಂದು ಹೇಳಿ ಹೋಗಿದ್ದಾರೆ.
Advertisement
Advertisement
ಕ್ಷೇತ್ರದ ಪ್ರತಿಯೊಂದು ಗ್ರಾಮಗಳನ್ನು ಅಭಿವೃದ್ಧಿಯತ್ತ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇನೆ. ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಭೇದ ಭಾವ ಮಾಡದೇ ಕೆಲಸ ಮಾಡುತ್ತೇನೆ. ಅತಿ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ ಮತ್ತು ಸಚಿವರಾಗಿರುವರಿಗೆ ತಾತ್ಕಾಲಿಕ ಸ್ಪೀಕರ್ ಸ್ಥಾನ ನೀಡುವ ಸಾಧ್ಯತೆಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು.
Advertisement
ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ನಿಮ್ಮ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಕುರಿತು ಪತ್ರಗಳನ್ನು ಬರೆದು ನೀಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. 2014ರಲ್ಲಿ ಫಿಲಿಭಿತ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮನೇಕಾ ಗಾಂಧಿ ಈ ಬಾರಿ ಸುಲ್ತಾನಪುರದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿದ್ದಾರೆ.
Advertisement
ಸುಲ್ತಾನಪುರದಿಂದ ಕಣಕ್ಕಿಳಿದಿದ್ದ ಬಹುಜನ ಸಮಾಜವಾದಿ ಪಾರ್ಟಿಯ ಚಂದ್ರ ಭದ್ರ ಸಿಂಗ್ ಸೋನು ವಿರುದ್ಧ 14 ಸಾವಿರ ಮತಗಳ ಅಂತರದಲ್ಲಿ ಮನೇಕಾ ಗಾಂಧಿ ಗೆಲುವು ದಾಖಲಿಸಿದ್ದಾರೆ. ಬಿಎಸ್‍ಪಿಯ ಸೋನು ಕೆಲವು ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಮನೇಕಾ ಗಾಂಧಿ ಅವರಿಗೆ ಭಾರೀ ಸ್ಪರ್ಧೆಯನ್ನು ನೀಡಿದ್ದರು.