Connect with us

Bengaluru City

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೆದೇವ್ರು ಬೆಡಗಿ

Published

on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ `ಮನೆದೇವ್ರು’ ಧಾರಾವಾಹಿಯಲ್ಲಿ ನಟಿಸಿದ ನಾಯಕಿ ಅರ್ಚನಾ ಲಕ್ಷ್ಮಿನಾರಾಯಣ ಸ್ವಾಮಿ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ ಕೆಲವು ದಿನಗಳ ಹಿಂದೆ ವಿಘ್ನೇಶ್ ಎಂಬವರು ಜೊತೆ ಮದುವೆಯಾಗಿದ್ದಾರೆ. ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಗುರುಹಿರಿಯರು ನಿಶ್ಚಯಿಸಿದ್ದ ದಿನದಂದು ಸಾಂಪ್ರದಾಯಕವಾಗಿ ವಿವಾಹವಾಗಿದ್ದಾರೆ. ತಮ್ಮ ಮೆಹಂದಿ, ಅರಿಶಿಣ ಶಾಸ್ತ್ರದ ಮತ್ತು ಮದುವೆ, ಆರತಕ್ಷತೆಯ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ಇದೇ ವರ್ಷ ಜುಲೈ ತಿಂಗಳಿನಲ್ಲಿ ನಟಿ ಅರ್ಚನಾ, ವಿಘ್ನೇಶ್ ಶರ್ಮಾ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿಘ್ನೇಶ್ ಮೂಲತಃ ಬೆಂಗಳೂರಿನವರೇ ಆಗಿದ್ದು, ನ್ಯೂಯಾರ್ಕ್ ನಲ್ಲಿ ವಾಸವಿದ್ದಾರೆ.

ನಟಿ ಅರ್ಚನಾ ಮೂಲತಃ ಮೈಸೂರಿನವರಾಗಿದ್ದು, 2013ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ನಂತರ ಅಲ್ಲಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸಲು ಶುರು ಮಾಡಿದ್ದರು. ಅರ್ಚನಾ `ಮಧುಬಾಲ’, `ಮನೆದೇವ್ರು’ ಧಾರಾವಹಿಯಲ್ಲಿ ನಟಿಸಿದ್ದರು. ಬಳಿಕ `ನೂರೊಂದು ನೆನಪು’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *