ಮಂಡ್ಯ: ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಪಕೋಡಾ ಮಾರುವುದು ಕೂಡ ಒಂದು ಉದ್ಯೋಗ ಎಂಬ ಹೇಳಿಕೆ ನೀಡಿದ್ರು. ಈ ಹೇಳಿಕೆ ವಿಪಕ್ಷಗಳಿಗೆ ಪ್ರಧಾನಿ ವಿರುದ್ದ ಟೀಕೆಗೆ ಅಸ್ತ್ರವಾಗಿತ್ತು. ಆದ್ರೆ ಪರ ವಿರೋಧದ ಹಂಗಿಲ್ಲದೆ ಎಂಜಿನಿಯರ್ ಒಬ್ಬರು ಬೋಂಡ-ಬಜ್ಜಿ ಮಾರುತ್ತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಯುವಕ ವೆಂಕಟೇಶ್ (ಮನು) ಬಜ್ಜಿ-ಬೋಂಡಾ ಮಾರಿ ಜೀವನ ನಡೆಸುತ್ತಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ನಿವಾಸಿಯಾಗಿರುವ ವೆಂಕಟೇಶ್ ಬಿಇ ಮೆಕಾನಿಕಲ್ ಓದಿದ್ದಾರೆ. ಇಂದು ಯಾವುದೇ ಸಂಕೋಚವಿಲ್ಲದೇ ಕೆ.ಆರ್.ಪೇಟೆ ಪಟ್ಟಣದ ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಪಕೋಡಾ, ಬೋಂಡಾ, ಬಜ್ಜಿ ಮಾರುತ್ತಿದ್ದಾರೆ.
Advertisement
ವೆಂಕಟೇಶ್ ಪ್ರಥಮ ದರ್ಜೆಯ ಅಂಕ ಪಡೆದು ಎಂಜಿನಿಯರಿಂಗ್ ಮುಗಿಸಿದ್ದಾರೆ. ಖಾಸಗಿ ಕಂಪನಿಯವರು ತನ್ನ ಓದಿಗೆ ಬೆಲೆ ಕೊಡದಿದ್ದಾಗ, ತನ್ನ ತಂದೆಗೆ ಜೀವನ ಕೊಟ್ಟ ಈ ಉದ್ಯಮವನ್ನು ಮುಂದುವರಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿದ ಹೊಸದರಲ್ಲಿ ಒಂದೆರಡು ಕಂಪನಿಗಳಿಲ್ಲಿ ಕೆಲಸ ಕೂಡ ಮಾಡಿದ್ದಾರೆ. ಜೊತೆಗೆ ಶ್ರವಣಬೆಳಗೊಳದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇಂದು ಪ್ರತಿದಿನ ಬಜ್ಜಿ ಬೋಂಡಾ ಮಾರುವ ಮೂಲಕವೇ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.