ಮಂಡ್ಯ: ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶಿಸುವ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿಕೆಗೆ ಹಾಡಿನ ಮೂಲಕ ಮಂಡ್ಯದ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದು, ಈ ವಿಡಿಯೋ ಸದ್ಯ ಎಲ್ಲಡೆ ವೈರಲ್ ಆಗಿದೆ.
ಉಮೇಶ್‍ಗೌಡ ಎಂಬವರ ಫೇಸ್ ಬುಕ್ ಪೇಜ್‍ನಿಂದ ರೇವಣ್ಣ ಅವರ ಕುರಿತು ಹಾಡಿದ ಹಾಡು ವೈರಲ್ ಆಗುತ್ತಿದೆ. ಕನ್ನಡ ಸಿನಿಮಾವೊಂದರ ಹಾಡೊಂದನ್ನು ರಿಮಿಕ್ಸ್ ಮಾಡಿ ಸಚಿವ ರೇವಣ್ಣನ ವಿರುದ್ಧ ವ್ಯಂಗ್ಯ ಮಾಡಲಾಗಿದೆ. ಬಿಸ್ಕಟ್ ರೇವಣ್ಣನಿಗೆ ಹಾಡಿನ ಮಂಗಳಾರತಿ, ಶೇರ್ ಮಾಡಲು ಮರೆಯದಿರಿ ಅಂತ ಬರೆದು ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಪೋಸ್ಟ್ ಮಾಡಿದ್ದಾನೆ. ಈಗ ಎಲ್ಲೆಡೆ ಹಾಡಿನ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ:ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ
ರೇವಣ್ಣ ರೇವಣ್ಣ ಏನಣ್ಣ ಏನಣ್ಣ, ಏನಂತ ಮಾತಾಡ್ತೀಯ ಎಂದು ಹಾಡು ಶುರುವಾಗುತ್ತೆ. ಬಳಿಕ ವಿಧವಿಧವಾಗಿ ರೇವಣ್ಣ ಅವರನ್ನು ಈ ಹಾಡಿನಲ್ಲಿ ಯುವಕ ಟೀಕಿಸಿದ್ದಾನೆ. ಅಲ್ಲದೆ ಸುಮಕ್ಕನ ಸ್ಥಿತಿಯನ್ನು ಲೇವಡಿ ಮಾಡಿದ್ಯಣ್ಣ, ನಿಖಿಲ್ ಗೆಲ್ಲೋದಿಕ್ಕೆ ಅಡ್ಡಗಾಲು ನೀನೆಯಣ್ಣ ಎಂದು ಹಾಡಿನ ಮೂಲಕವೇ ಟಾಂಗ್ ನೀಡಿದ್ದಾನೆ. ಸುಮಾರು 1 ನಿಮಿಷ 40 ಸೆಕೆಂಡ್ ಇರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv