ಮಂಡ್ಯ: ಇದಕ್ಕಿದ್ದಂತೆ ಒಂದು ಊರಿನ 50 ಜನರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ 50 ಮಂದಿ ಜನರಿಗೆ ಕಳೆದ ಹಲವು ದಿನಗಳಿಂದ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಗ್ರಾಮದಲ್ಲಿ 100 ಕುಟುಂಬಗಳಿದ್ದು, ಇದರಲ್ಲಿ ಬಹುತೇಕ ಕುಟುಂಬದ ಸದಸ್ಯರಿಗೆ ಜ್ವರ ಕಾಣಿಸಿಕೊಂಡಿದೆ. ಇದರದ ಇಡೀ ಗ್ರಾಮ ಹಾಗೂ ಅಕ್ಕ-ಪಕ್ಕದ ಜನರು ಗಾಬರಿಗೊಂಡಿದ್ದಾರೆ.
Advertisement
Advertisement
ಈ ಗ್ರಾಮಕ್ಕೆ ಮುಂಬೈ, ದುಬೈ ಹಾಗೂ ಬೆಂಗಳೂರಿನಿಂದ ಹಲವು ಜನರು ಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಲವು ದಿನಗಳಿಂದ ಜ್ವರ ಬಂದಿದ್ದರೂ ಸಹ ಜನರು ಆಸ್ಪತ್ರೆಗೆ ಹೋಗುತ್ತಿಲ್ಲ. ಆಸ್ಪತ್ರೆಗೆ ಹೋದರೆ ಕ್ವಾರಂಟೈನ್‍ನಲ್ಲಿ ಹಾಕಬಹುದು ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ.
Advertisement
Advertisement
ಇಂದಿಗೂ ಸಹ ಈ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾಲಿಟ್ಟಿಲ್ಲ. ಕೇವಲ ಆಶಾ ಕಾರ್ಯಕರ್ತೆಯರು ಫೋನ್‍ನಲ್ಲಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪತ್ರಕರ್ತರ ಸಹಾಯದಿಂದ ಜನರು ಮಾತ್ರೆ ತರಿಸಿಕೊಂಡು ತೆಗೆದುಕೊಳ್ಳುತ್ತಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಜನರನ್ನು ತಪಾಸಣೆ ಮಾಡಬೇಕಾಗಿದೆ.