ವಾಷಿಂಗ್ಟನ್: ಅಮೆರಿಕದಲ್ಲಿ (America) ಮಂಡ್ಯ (Mandya) ಮೂಲದ ಟೆಕ್ ಉದ್ಯಮಿಯೊಬ್ಬರು ಪತ್ನಿ ಮತ್ತು ಮಗನನ್ನು ಗುಂಡು ಹಾರಿಸಿ ಹತ್ಯೆಗೈದು, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಮಯದಲ್ಲಿ ದಂಪತಿಯ ಮತ್ತೊಬ್ಬ ಮಗ ಮನೆಯಲ್ಲಿ ಇಲ್ಲದ ಕಾರಣ ಬಚಾವ್ ಆಗಿದ್ದಾನೆ.
ವಾಷಿಂಗ್ಟನ್‌ನ ನ್ಯೂಕ್ಯಾಸಲ್‌ನಲ್ಲಿ ಏ.24 ರಂದು ಈ ಘಟನೆ ನಡೆದಿದೆ. ಮೃತರನ್ನು ಹರ್ಷವರ್ಧನ ಎಸ್ ಕಿಕ್ಕೇರಿ (57), ಶ್ವೇತಾ ಪನ್ಯಂ (44) ಹಾಗೂ ದಂಪತಿಯ 14 ವರ್ಷದ ಮಗ ಎಂದು ಗುರುತಿಸಲಾಗಿದೆ. ಮೃತ ಬಾಲಕ ಹಾಗೂ ಇನ್ನೋರ್ವ ಮಗನ ಗುರುತನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ಭಾರತದಿಂದ ಪಾಕ್‌ಗೆ ಮೆಡಿಸಿನ್ ಬಂದ್ – ಔಷಧವಿಲ್ಲದೆ ಕೆಲಸ ತೊರೆಯಲು ಮುಂದಾಗ್ತಿರೋ ವೈದ್ಯರು!
ಈ ಉಗ್ರ ಕೃತ್ಯಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ದಂಪತಿ ಅನ್ಯೋನ್ಯವಾಗಿದ್ದರು, ಅಲ್ಲದೇ ನೆರೆಹೊರೆಯವರ ಬಳಿ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹರ್ಷವರ್ಧನ್, 2017ರಲ್ಲಿ ಅಮೆರಿಕದಿಂದ ಬಂದು, ಮೈಸೂರಿನಲ್ಲಿ ಹೋಲೋವರ್ಲ್ಡ್ ಕಂಪನಿ ಸ್ಥಾಪಿಸಿದ್ದರು. ಅವರ ಪತ್ನಿ ಕಂಪನಿಯ ಸಹ-ಸಂಸ್ಥಾಪಕರಾಗಿದ್ದರು. 2022ರ ಕೋವಿಡ್ -19 ಸಮಯದಲ್ಲಿ ಕಂಪನಿಯು ಬಂದ್ ಆಗಿತ್ತು. ಬಳಿಕ ಅವರು ಅಮೆರಿಕಕ್ಕೆ ತೆರಳಿದ್ದರು.
ಹರ್ಷವರ್ಧನ್ ಗಡಿ ಭದ್ರತೆ ವಿಚಾರದಲ್ಲಿ ರೋಬೋಟ್‌ಗಳನ್ನು ಬಳಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಇನ್ನೂ ರೊಬೊಟಿಕ್ಸ್‌ನಲ್ಲಿ ಪರಿಣಿತರಾದ ಇವರು ಯುಎಸ್‌ನಲ್ಲಿ ಮೈಕ್ರೋಸಾಫ್ಟ್‌ಗಾಗಿಯೂ ಕೆಲಸ ಮಾಡಿದ್ದರು. ಇದನ್ನೂ ಓದಿ: ಸಂಧಾನಕ್ಕೆಂದು ಕರೆದು ದಂಪತಿ ಕತ್ತು ಸೀಳಿ ಬರ್ಬರ ಹತ್ಯೆ – 2 ವರ್ಷದ ಮಗುವಿನ ಎದುರೇ ಕೊಲೆ